ಕುಷ್ಠರೋಗ ಪತ್ತೆಗೆ ಆಂದೋಲನ

Untitled design(10)
ಹೂವಿನಹಡಗಲಿಯಲ್ಲಿ ಸೋಮವಾರ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಟಿಎಚ್‌ಒ ಡಾ.ಸ್ವಪ್ನಾ ಕಟ್ಟಿ ಚಾಲನೆ ನೀಡಿದರು. ಹಿರಿಯ ಆರೋಗ್ಯ ಸಹಾಯಕ ರಾಜೇಂದ್ರ ಗುಡೇಕೋಟೆ, ಕಿರಿಯ ಆರೋಗ್ಯ ನಿರೀಕ್ಷಕ ಸುನೀಲ್, ಕುಷ್ಠರೋಗ ವಿಭಾಗದ ಮೇಲ್ವಿಚಾರಕ ಬಸವರಾಜ ಇತರರಿದ್ದರು.
Published on

ಹೂವಿನಹಡಗಲಿ: ತಾಲೂಕಿನಾದ್ಯಂತ 15 ದಿನಗಳ ಕಾಲ (ಆ.14) ಕುಷ್ಠರೋಗ ಪ್ರಕರಣಗಳ ಪತ್ತೆ ಹಚ್ಚುವ ಆಂದೋಲನ ಅರಂಭಿಸಿದ್ದು, ಪ್ರತಿ ಗ್ರಾಮದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಟಿಎಚ್‌ಒ ಡಾ.ಸ್ವಪ್ನಾ ಕಟ್ಟಿ ಹೇಳಿದರು.

ಪಟ್ಟಣದ ಟಿಎಚ್‌ಒ ಕಚೇರಿ ಬಳಿ ಸೋಮವಾರ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆರು, ಸ್ವಯಂ ಸೇವಕರು ಪ್ರತಿ ಮನೆಗೂ ಭೇಟಿ ನೀಡಿ, ಪರೀಕ್ಷಿಸಲಿದ್ದಾರೆ. ರೋಗದ ಲಕ್ಷಣಗಳು ಕಂಡು ಬಂದರೆ ಅವರನ್ನು ಶಂಕಿತ ಕುಷ್ಠರೋಗಿ ಎಂದು ಪರಿಗಣಿಸಿ, ಸೂಕ್ತ ಚಿಕಿತ್ಸೆ ನೀಡಲಾಗುವುದು. ಕಳೆದ ಬಾರಿ ತಾಲೂಕಿನಲ್ಲಿ ಎಂಟು ಪ್ರಕರಣಗಳು ಪತ್ತೆಯಾಗಿದ್ದವು. ಅವರಿಗೆ ಚಿಕಿತ್ಸೆ ಮುಂದುವರಿದಿದೆ. ತಾಲೂಕಿನಲ್ಲಿ 2,23,820 ಜನಸಂಖ್ಯೆ ಇದ್ದು, 44,764 ಮನೆಗಳಿಗೆ ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರು, ಕುಷ್ಠರೋಗ ಪ್ರಕರಣಗಳ ಪತ್ತೆಗಾಗಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ವ್ಯವಸ್ಥಾಪಕ ಬಿ.ಇ.ಮಹೇಶ, ಹಿರಿಯ ಆರೋಗ್ಯ ಸಹಾಯಕ ರಾಜೇಂದ್ರ ಗುಡೇಕೋಟೆ, ಕಿರಿಯ ಆರೋಗ್ಯ ನಿರೀಕ್ಷಕ ಸುನೀಲ್, ಕುಷ್ಠರೋಗ ವಿಭಾಗದ ಮೇಲ್ವಿಚಾರಕ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net