ಹೋರಾಟಗಾರರ ಸ್ಮರಿಸುವುದು ನಮ್ಮ ಧರ್ಮ

hadagali flag
ಹೂವಿನಹಡಗಲಿಯ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜ ವಂದನೆ ಸ್ವೀಕರಿಸಿದ ತಹಶೀಲ್ದಾರ್ ಕೆ.ಶರಣಮ್ಮ. ಶಾಸಕ ಕೃಷ್ಣ ನಾಯ್ಕ, ಯೋಜನಾ ನಿರ್ದೇಶಕ ಅಶೋಕ ತೋಟದ, ಇಒ ಎಸ್.ಎಸ್.ಪ್ರಕಾಶ, ಸಿಪಿಐ ಸುಧೀರ್‌ಕುಮಾರ್ ಬೆಂಕಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಇತರರಿದ್ದರು.
Published on

ಹೂವಿನಹಡಗಲಿ: ಭಾರತ 77ನೇ ಸ್ವಾತಂತ್ರೃ ಸಂಭ್ರಮದ ಸಂದರ್ಭದಲ್ಲಿ ಸರ್ವತೋಮುಖ ಪ್ರಗತಿ ಹೊಂದಿದೆ ಎಂದು ತಹಸೀಲ್ದಾರ್ ಕೆ.ಶರಣಮ್ಮ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರೃಕ್ಕಾಗಿ ದೇಶ 6 ಲಕ್ಷ ಹೋರಾಟಗಾರರನ್ನು ಕಳೆದುಕೊಂಡಿದೆ. ಭಾರತ ವಿಶ್ವ ಗುರುವಿನ ಸ್ಥಾನ ಪಡೆಯಲು ಶ್ರಮಿಸಿರುವ ಎಲ್ಲರನ್ನೂ ಸ್ಮರಿಸುವ ಮನೋಧರ್ಮ ನಮ್ಮದು. ದೇಶ ಕಲೆ, ಸಂಸ್ಕೃತಿ, ಭಾಷೆ, ಕ್ರೀಡೆ ಮುಂತಾದ ವಿಷಯಗಳಲ್ಲಿ ಪ್ರಗತಿಯತ್ತ ಸಾಗುತ್ತಿದೆ. ವೈವಿಧ್ಯತೆಯಲ್ಲಿ ಏಕತೆ ಇರುವ ಕಾರಣ ಇಡೀ ವಿಶ್ವ ನಿಬ್ಬೆರಗಾಗಿ ನೋಡುತ್ತಿದೆ ಎಂದರು.

ಇದನ್ನೂ ಓದಿ: ಎಸ್‌ಎಲ್ ಶೇಟ್ ಡೈಮಂಡ್ ಹೌಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಶಾಸಕ ಕೃಷ್ಣ ನಾಯ್ಕ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಭವಿಷ್ಯ ಹಾಗೂ ಪ್ರಜೆಯಾಗಿ ರೂಪಿಸಬೇಕು ಎಂದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಹನೀಯರ ವೇಷ ತೊಟ್ಟು ಗಮನ ಸೆಳೆದರು. ಯೋಜನಾ ನಿರ್ದೇಶಕ ಅಶೋಕ ತೋಟದ, ಇಒ ಎಸ್.ಎಸ್.ಪ್ರಕಾಶ, ಸಿಪಿಐ ಸುಧೀರ್‌ಕುಮಾರ್ ಬೆಂಕಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಇತರರಿದ್ದರು. ಧ್ವಜಾರೋಹಣಕ್ಕೂ ಮುನ್ನ ತಹಸೀಲ್ದಾರ್ ಶರಣಮ್ಮ ವಿವಿಧ ಶಾಲಾ-ಕಾಲೇಜು ಹಾಗೂ ಎನ್‌ಸಿಸಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯಿಂದ ಗೌರವವಂದನೆ ಸ್ವೀಕರಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net