ಸಮುದಾಯಗಳ ಕಲ್ಯಾಣಕ್ಕೆ ಕಾಂಗ್ರೆಸ್ ಬದ್ಧ

dj hyr huvinahole
Published on

ಹಿರಿಯೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಹೂವಿನಹೊಳೆ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಜೀವಾಳವಾಗಿದೆ.

ದೇಶದಲ್ಲೇ ಮಾದರಿ ಆಡಳಿತ ನೀಡಲು ನಾವು ಬದ್ಧರಾಗಿದ್ದೇವೆ ಎಂದರು.

ಸರ್ಕಾರದ ಮಟ್ಟದಲ್ಲಿ ಹೋರಾಡಿ ಅಗತ್ಯ ಅನುದಾನ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು.

ನನ್ನ ಪಾಲಿಗೆ ಮತದಾರರೇ ದೇವರು, ಜನ ಸೇವೆಯೇ ನನ್ನ ಕಾಯಕ, ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು 3 ಬಾರಿ ಆಯ್ಕೆ ಮಾಡಿದ್ದಾರೆ ಅವರ ಋಣ ತೀರಿಸುವೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ, ಗೀತಾ, ಕೆಪಿಸಿಸಿ ಸದಸ್ಯ ಸುರೇಶ್ ಬಾಬು, ಈರಲಿಂಗೇಗೌಡ, ಖಾದಿ ಜೆ. ರಮೇಶ್,

ಜ್ಞಾನೇಶ್, ಮಹಾಂತೇಶ್, ಈಶ್ವರಪ್ಪ, ತಿಪ್ಪೇಸ್ವಾಮಿ, ಹೇಮಂತ್ ಗೌಡ, ಕಲ್ಲಹಟ್ಟಿ ಹರೀಶ್, ಗುರು, ಟಿ.ಚಂದ್ರಶೇಖರ್, ಡಾ.ಜೆ. ಸುಜಾತ, ಶಿವಕುಮಾರ್, ಜಿ.ಎಲ್.ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net