ಹೂಮಳೆ ಗೈದ ಸಾರ್ವಜನಿಕರು

Published on

ಹರಪನಹಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದ ವರ್ಷದ ವಿಜಯದಶಮಿ ಪಥ ಸಂಚಲನ ಪಟ್ಟಣದ ಕೆಂಪೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಮಟ್ಟೇರ ಓಣಿ, ಕೊಟ್ಟೂರು ರಸ್ತೆಯ ಮೂಲಕ ತೆಗ್ಗಿನ ಮಠ ಮುಂಭಾದಲ್ಲಿ ಸಾಗಿ ತಾಯಮ್ಮನ ಹುಣಸೇ ಮರದ ಮೂಲಕ ಹಳೇ ಬಸ್ ನಿಲ್ದಾಣದ ಮೂಲಕ ಐಬಿ ವೃತ್ತಕ್ಕೆ ತಲುಪಿದರು. ಬೀದಿಯುದ್ದಕ್ಕೂ ಕೇಸರಿ ಬಾವುಟಗಳು ಕಂಗೊಳಿಸುತ್ತಿದ್ದವು.

500ಕ್ಕೂ ಹೆಚ್ಚು ಗಣವೇಶಾಧಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರತ್ ಮಾತಾಕಿ ಜೈ ಎನ್ನುವ ಘೋಷಾವಾಕ್ಯ ಕೂಗುತ್ತಾ ಗಣವೇಶಾಧಾರಿಗಳಿಗೆ ಸಾರ್ವಜನಿಕರು ಹೂಮಳೆ ಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net