ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ: ಜ.26ರಿಂದ ಐದು ದಿನ ನಡೆಯಲಿರುವ ಕಾರ್ಯಕ್ರಮ

Flower Show mandya
Published on

ಮಂಡ್ಯ: ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರಿನ ಎರಡು ಉದ್ಯಾನ ಐದು ದಿನದ ಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿವೆ.
ಹಿಂದೆಲ್ಲ ಡಿಸೆಂಬರ್‌ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನವು ಇತ್ತೀಚಿನ ವರ್ಷಗಳಲ್ಲಿ ಜನವರಿಗೆ ಬದಲಾಗಿದೆ. ಅದರಂತೆ ಈ ವರ್ಷವೂ ಕೂಡ ಆಯೋಜನೆಯಾಗಿದ್ದು, ಈ ಬಾರಿ ಜನರಿಗೆ ಮನರಂಜನೆ ನೀಡುವ ಜತೆಗೆ ಜಾಗೃತಿ ಮೂಡಿಸುವಂತಹ ವಿಭಿನ್ನ ಕೆಲಸಕ್ಕೆ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಎದುರಿನ ಕಾವೇರಿವನ ಮತ್ತು ಭವ್ಯವನಗಳನ್ನು ಬಳಸಿಕೊಳ್ಳುತ್ತಿದೆ. ಎರಡೂ ಪಾರ್ಕ್ ಸುತ್ತಲೂ ಗ್ರೀನ್ ಮ್ಯಾಟ್‌ಗಳನ್ನು ಕಟ್ಟಡಲಾಗಿದೆ. ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಬರುವವರ ಮನಸ್ಸಿಗೆ ಮುದ ನೀಡುವಂತೆ ಪಾರಂಪರಿಕ ಶೈಲಿಯ ಆಕರ್ಷಕ ಸ್ವಾಗತ ಕಮಾನುಗಳು, ಮಂಟಪಗಳನ್ನು ನಿರ್ಮಿಸಲಾಗಿದೆ.
ಲಪುಷ್ಪ ಪ್ರದರ್ಶನ ಕುರಿತು ಬುಧವಾರ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಮಾಹಿತಿ ನೀಡಿದ ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷರೂ ಆದ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಈ ಬಾರಿ ಹಲವು ವಿಶೇಷತೆಗಳನ್ನು ಕಾಣಬಹುದು. ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಮರಳಿನ ಕಲಾಕೃತಿ(ಸ್ಯಾಂಡ್‌ಆರ್ಟ್) ರಚಿಸಲಾಗುತ್ತಿದೆ. ದಾನದ ಗೋಡೆ ಅಥವಾ ವಾಲ್ ಆಫ್ ಡೊನೇಷನ್ ಹೆಸರಿನ ಪುಟ್ಟ ಗೋಡೆ ಮಳಿಗೆ ತೆರೆಯಲಾಗುತ್ತಿದೆ. ಇದರಲ್ಲಿ ಜನರಿಗೆ ತಮಗೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ತಂದು ಇಡಬಹುದು. ಅದರ ಉಪಯೋಗ ಬರುವವರು ಉಚಿತವಾಗಿ ಕೊಂಡೊಯ್ಯಬಹುದು ಎಂದರು.
ಅಂತೆಯೇ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಜಿಲ್ಲೆಯ ರೈತ ಉತ್ಪಾದಕ ಕಂಪನಿಗಳ ವಿವಿಧ ಉತ್ಪನ್ನಗಳ ರೀಟೇಲ್ ಬ್ರ್ಯಾಂಡ್‌ಗಳ ಪ್ರದರ್ಶನ ಮತ್ತು ಮಾರಾಟ, ವೈವಿಧ್ಯಮಯ ಅಲಂಕಾರಿಕ ಹೂ ಕುಂಡಗಳ ಜೊಡಣೆ, ಆಕರ್ಷಕ ಬಗೆಯ ಬೋನ್ಸಾಯ್ ಜೋಡಣೆ ಮತ್ತು ಪ್ರದರ್ಶನ, ಅಲಂಕಾರಿಕ ತರಕಾರಿ ಕೆತ್ತನೆ ಪ್ರದರ್ಶನ, ಪೌಷ್ಟಿಕ ಕೈತೋಟದ ಮಾದರಿ ಪ್ರದರ್ಶನ, ಪ್ರಗತಿಪರ ರೈತರ ತೋಟಗಾರಿಕೆ ಬೆಳೆಗಳ ವೈವಿಧ್ಯ ಮಾದರಿಗಳ ಪ್ರದರ್ಶನ, ಅಕ್ವೇರಿಯಂ ಮತ್ತು ವಿವಿಧ ತಳಿಯ ಮೀನುಗಳ ಪ್ರದರ್ಶನವೂ ಇರಲಿದೆ ಎಂದು ಹೇಳಿದರು.
ಪ್ರತಿನಿತ್ಯ ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 6ರಿಂದ ರಾತ್ರಿ 8.30ರವರೆಗೆ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಇರಲಿವೆ. ತೋಟಗಾರಿಕೆ ಕಚೇರಿ ಮತ್ತು ಪಾರ್ಕ್ ನಡುವಿನ ರಸ್ತೆಯಲ್ಲಿ ತಿಂಡಿತಿನಿಸುಗಳ ಮಳಿಗೆ ತೆರೆಯಲಾಗುತ್ತಿದೆ. ಯುವ ಪೀಳಿಗೆಯ ಜ್ಞಾನ ವೃದ್ಧಿ, ಹಸಿರು-ಪರಿಸರ ಕಾಳಜಿ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬಾರಿ ಫಲಪುಷ್ಪ ಪ್ರದರ್ಶನ ಇರಲಿದೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎನ್.ರೂಪಶ್ರೀ, ಹಿರಿಯ ತೋಟಗಾರಿಕೆ ನಿರ್ದೇಶಕ ಎನ್.ಸಿ.ಶಶಿಧರ, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ಸಿ.ಎಸ್.ಅರುಣ್‌ಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಪಿ.ಶ್ರೀಧರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್.ನಿರ್ಮಲಾ ಇದ್ದರು.

ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ

  • 2 ಲಕ್ಷಕ್ಕೂ ಹೆಚ್ಚು ಬಗೆಯ ಹೂವುಗಳು ಹಾಗೂ 25ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಅಲಂಕಾರಿಕ ಗಿಡಗಳು ಪ್ರದರ್ಶನ. ವಿವಿಧ ವರ್ಣಗಳ 20 ಸಾವಿರಕ್ಕೂ ಹೆಚ್ಚು ಅಲಂಕಾರಿಗಳ ಹೂಕುಂಡಗಳ ಜೋಡಣೆ.
  • ಸಿರಿಧಾನ್ಯದಲ್ಲಿ ಚಂದ್ರಯಾನ-3, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ನಿತ್ಯ ಸಚಿವ ಕೆ.ವಿ.ಶಂಕರಗೌಡ ಕಲಾಕೃತಿ ರಚನೆ ಮತ್ತು ಪ್ರದರ್ಶನ.
  • ಎತ್ತಿನಗಾಡಿ, ಹಸು, ರೈತರ ಕಲಾಕೃತಿಗಳ ಪ್ರದರ್ಶನ, ಅಯೋಧ್ಯೆ ರಾಮಮಂದಿರ, ಶಿವಪುರ ಧ್ವಜಸತ್ಯಾಗ್ರಹ ಸೌಧ, ರಾಮಭಂಟ ಹನುಮ, ಹಿಮಾಲಯದಲ್ಲಿ ಶಿವನ ಕಲಾಕೃತಿ ಪ್ರದರ್ಶನ.
  • ತರಕಾರಿ ಕೆತ್ತನೆ ತಜ್ಞ ಹರೀಶ್ ಬ್ರಹ್ಮಾವರ್ ಮತ್ತು ತಂಡದಿಂದ ತರಕಾರಿಗಳ ಕೆತ್ತನೆ ಮತ್ತು ಪ್ರದರ್ಶನ.
  • ಪಶುಸಂಗೋಪನಾ ಇಲಾಖೆಯಿಂದ ಬೀದಿ ನಾಯಿಗಳ ಹಾವಳಿ, ರೇಬಿಸ್ ರೋಗದ ಗುಣಲಕ್ಷಣಗಳು ಮತ್ತು ಲಸಿಕೆ ಮಹತ್ವದ ಬಗ್ಗೆ ಜಾಗೃತಿ.
  • ರಾಜ್ಯ ಸರ್ಕಾರದ 5 ಗ್ಯಾರಂಟಿ ಕಾರ್ಯಕ್ರಮಗಳ ಪ್ರಾತ್ಯಕ್ಷಿಕೆ ಪ್ರದರ್ಶನ.
  • ಆರೋಗ್ಯ ಇಲಾಖೆಯಿಂದ ಹೆಣ್ಣು ಭ್ರೂಣ ಹತ್ಯೆ ಮತ್ತು ನೈರ್ಮಲ್ಯದ ಬಗ್ಗೆ ಜನರನ್ನು ಜಾಗೃಗೊಳಿಸುವ ನಿಟ್ಟಿನಲ್ಲಿ ಕಲಾಕೃತಿಗಳ ಪ್ರದರ್ಶನ.
  • ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ 10 ವಿದ್ಯಾರ್ಥಿಗಳ ೆಟೋ ಪ್ರದರ್ಶನ.
  • ಕೃಷಿ ಇಲಾಖೆಯಿಂದ ಸಂಕ್ರಾಂತಿ ಸುಗ್ಗಿ, ಬೆಲ್ಲದ ಪರಿಷೆ ಆಯೋಜನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net