ಬೀರನಕೊಪ್ಪ ಗ್ರಾಮದಲ್ಲಿ ಲಕ್ಷಾಂತರ ರೂ. ಮೌಲ್ಯದ ಹೂವಿನ ಬೀಜ ಕಳವು

FLOWER THIEFT
Published on

ಬ್ಯಾಡಗಿ: ತಾಲೂಕಿನ ಬೀರನಕೊಪ್ಪ ಗ್ರಾಮದ ಆಂಜನೇಯ ಮಸಾಲೆ ಎನ್ನುವರಿಗೆ ಸೇರಿದ ಜಮೀನಿನಲ್ಲಿ ಶನಿವಾರ ತಡರಾತ್ರಿ ಸುಮಾರು 10-12 ಜನರ ಕಳ್ಳರು ಚೆಂಡು ಹೂವುಗಳ ಬೀಜಗಳನ್ನು ಕದ್ದು ಪರಾರಿಯಾಗಿದ್ದಾರೆ.

ಕಳವು ಮಾಡುವ ವೇಳೆ ತಂದಿದ್ದ ದೊಣ್ಣೆಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. 10 ಗುಂಟೆಯ ಒಂದು ಪ್ಲಾಟ್​ನಲ್ಲಿ ಹೂವು ಬೆಳೆಯಲಾಗಿತ್ತು. 1.5 ಲಕ್ಷ ರೂ. ಖರ್ಚು ಮಾಡಿ ಮೂರು ತಿಂಗಳ ಶ್ರಮವಹಿಸಿದ್ದರು. ಒಂದು ಕಿಲೋ ಬೀಜಕ್ಕೆ 70 ಸಾವಿರ ರೂ. ಮೌಲ್ಯವಿದ್ದು, ಅಂದಾಜು 7 ಲಕ್ಷ ರೂ. ಬೀಜ ಕಳವಾಗಿದೆ.

ದೊಣ್ಣೆ ಹಿಡಿದು ಓಡಾಡಿದ ಕಳ್ಳರನ್ನು ನೋಡಿದ ರೈತರು ರಾತ್ರಿ ಹೊತ್ತು ಹೊಲಕ್ಕೆ ಹೋಗಲು ಹಿಂಜರಿಯುವಂತಾಗಿದೆ. ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net