ಪಾತಾಳಕ್ಕೆ ಕುಸಿದ ಹೂವಿನ ದರ

11
Published on

ವೆಂಕಟರಾಜು ಎಸ್​ ದೊಡ್ಡಬಳ್ಳಾಪುರ

ಹೂವಿನ ಬೆಲೆ ಏಕಾಏಕಿ ಕುಸಿತ ಕಂಡಿಗೊಂಡಿದ್ದು, ಹೂವು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಾರುಕಟ್ಟೆಯಲ್ಲಿ ಬಹುತೇಕ ಹೂವುಗಳು ಪ್ರತಿ ಕೆಜಿಗೆ 30 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದು, ರೈತರಿಗೆ ಕನಿಷ್ಠ ಬೆಲೆ ಇಲ್ಲವಾಗಿದೆ. ತಾಲೂಕಿನಲ್ಲಿ ಹೆಚ್ಚಾಗಿ ಹೂವು ಬೆಳೆಯುತ್ತಾರೆ. ಈ ಬಾರಿ ಗಣೇಶ ಹಬ್ಬದ ವೇಳೆಯಲ್ಲಿ ರೈತರು ಹೆಚ್ಚಾಗಿ ಹೂವು ಬೆಳೆಯಲು ಮುಂದಾಗಿದ್ದರು. ಇದರಿಂದ ಈಗ ಉತ್ತಮ ಫಸಲು ಬರುತ್ತಿದೆ. ಆದರೆ, ಸದ್ಯ ದೀಪಾವಳಿವರೆಗೂ ಯಾವುದೇ ಹಬ್ಬ ಇಲ್ಲದ ಕಾರಣ ಹೂವಿಗೆ ಬೇಡಿಕೆ ಇಲ್ಲವಾಗಿದ್ದು, ದರವೂ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಬಹುತೇಕ ಹೂವುಗಳು ಪ್ರತಿ ಕೆಜಿಗೆ 50 ರೂ.ನೊಳಗೆಯೇ ಮಾರಾಟವಾಗುತ್ತಿವೆ. ಇದಲ್ಲದೆ, ನೂರು ರೂಪಾಯಿಗೆ ಮೂರು ಬಾರು ಹೂವು ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿನ ಗುಣಮಟ್ಟದ ಹೂವು ದೊರೆಯುತ್ತಿದೆ.

ಎಷ್ಟಿದೆ ಬೆಲೆ? : ದಸರಾ ಸಮಯದಲ್ಲಿ ಹೆಚ್ಚು ಹೂವು ಮಾರಾಟವಾಗಿ ರೈತರಿಗೆ ಒಂದಿಷ್ಟು ಲಾಭ ಸಿಕ್ಕಿತ್ತು. ಆದರೆ, ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಕುಸಿದಿದೆ. ಪ್ರತಿ ಕೆಜಿ ಹೂವಿಗೆ 10 ರಿಂದ 20 ರೂಪಾಯಿ ಮಾತ್ರ ಸಿಗುತ್ತಿದೆ. ಇದರಿಂದ ಹಾಕಿದ ಬಂಡಾವಳ ಕೂಡ ಕೈಸೇರುವುದು ಅನುಮಾನ ಎಂಬಂತಾಗಿದೆ. ಇದರ ಜತೆಗೆ ಹೂಗಳನ್ನು ತಂದು ಕಟ್ಟಿ ಮಾರುವವರಿಗೂ ಲಾಭ ದೂರದ ಮಾತಾಗಿದೆ. ಉತ್ತಮವಾದ ಹೂಗಳು ಪ್ರತಿ ಕೆಜಿಗೆ 40 ರೂ.ಗಳಿಗೆ ಮಾರಾಟವಾಗುತ್ತಿದೆ.

ಕಸಕ್ಕೆ ಹಾಕುವ ಸ್ಥಿತಿ : ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವು ಪೂರೈಕೆಯಾಗುತ್ತಿದ್ದರೂ ನಿರೀೆಗೆ ಅನುಗುಣವಾಗಿ ದರ ಸಿಗುತ್ತಿಲ್ಲ. ರಸ್ತೆಯಲ್ಲಿ ಎಸೆದು ಹೋಗುವಂತಹ ಪರಿಸ್ಥಿತಿ ಇದೆ. ಶ್ರಾವಣ ಮಾಸದಲ್ಲಿ ವೆಂಕಟರಮಣಸ್ವಾಮಿ ಸೇರಿ ವಿವಿಧ ದೇಗುಲಗಳಲ್ಲಿ ಧಾರ್ಮಿಕ ಆಚರಣೆಗಳು, ವರಮಹಾಲ್ಮ ಹಾಗೂ ಗಣೇಶೋತ್ಸವ, ದಸರಾ ಹಿನ್ನೆಲೆಯಲ್ಲಿ ಹೂವು ಬೇರೆ ಬೇರೆ ಕಡೆಗೆ ಸಾಗಾಣೆಯಾಗಿ, ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಈಗ ಇಲ್ಲದಂತಾಗಿದೆ. ಇನ್ನೂ ದೀಪಾವಳಿ ಹಬ್ಬವನ್ನು ಎದುರು ನೋಡುವಂತಾಗಿದೆ.

ಹೆಚ್ಚಿನ ಪ್ರಮಾಣದ ಹೂವು ಪೂರೈಕೆ ಆಗುತ್ತಿರುವುದರಿಂದ ಬೆಲೆ ಇಳಿಕೆ ಕಂಡಿದೆ. ಇದರಿಂದ ಯಾವುದೇ ಲಾಭ ಇಲ್ಲದಂತಾಗಿದೆ. > ಸುರೇಶ್​ ಹೂವು ಮಾರಾಟಗಾರರು. ಕಷ್ಟಬಿದ್ದು ಬೆಳೆದ ಹೂವಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಹಾಕಿದ ಬಂಡಾವಳ ಕೂಡ ಬರುವುದು ಅನುಮಾನ ಎಂಬಂತಾಗಿದೆ. > ರವಿ ಹೂಬೆಳೆಗಾರದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net