

ಕೋಲಾರ: ಸತತ 6 ತಿಂಗಳಿಂದ ಹೂವಿನ ಬೆಲೆ ಕುಸಿತ ಕಂಡಿದ್ದು, ಹಬ್ಬ ಹರಿದಿನಗಳಲ್ಲಿ ಒಂದೆರಡು ದಿನ ಬೆಲೆ ಏರಿಕೆ ಆಗಿ, ಮತ್ತೆ ಬೆಲೆ ಣಗೊಳ್ಳುತ್ತಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಮಾರ್ಚ್ನಿಂದ ಸೇವಂತಿಗೆ, ಚೆಂಡು, ಬಟನ್ ರೋಜ್ ಬೆಲೆ ಏರಿಕೆಯಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ. ಶ್ರಾವಣ, ವರಲಕ್ಷಿ$್ಮ ಹಾಗೂ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಾತ್ರ ಒಂದೆರಡು ದಿನ ಬೆಲೆ ಏರಿಕೆಯಾಗಿದ್ದು, ಬಿಟ್ಟರೆ ಮತ್ತೆ ಚೇತರಿಕೆ ಕಾಣಲಿಲ್ಲ. ದಸರಾ ಹಬ್ಬದ ವೇಳೆ ಹೂವಿಗೆ ಭಾರಿ ಬೆಲೆ ಏರಿಕೆ ಆಗುತ್ತದೆ ಎಂದು ಅಂದಾಜಿಸಲಾಗಿತ್ತಾದರೂ ಚೆಂಡು ಹೂವು ಕೆಜಿಗೆ 10&20 ರೂ. ಗಡಿ ದಾಟಲಿಲ್ಲ, ಸೇವಂತಿಗೆ 20 ರಿಂದ 30 ರೂ.ಗೆ ರೈತರಿಂದ ಖರೀದಿ ಮಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಹೂವು ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, 30ರಷ್ಟು ರೈತರು ಸೇವಂತಿಗೆ, ಚೆಂಡು ಹೂವು ಬೆಳೆಯುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿಯತೊಡಗಿದೆ. ಇತ್ತೀಚಿಗೆ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಮತ್ತು ತೇವಾಂಶ ಹೆಚ್ಚಾಗಿರುವುದರಿಂದ ಕೋಲಾರ ಮಾರುಕಟ್ಟೆಯಿಂದ ಆಂಧ್ರಪ್ರದೇಶ, ತಮಿಳುನಾಡಿಗೆ ಹೂವು ರ್ತು ಆಗುತ್ತಿಲ್ಲ. ಫಸಲು ಉತ್ತಮವಾಗಿ ಬಂದಿದ್ದರೂ ಬೆಲೆ ಇಲ್ಲದ ಕಾರಣ ಹೂವು ಕೀಳುವ ಖರ್ಚು ಬಾರದೆ ಇರುವುದರಿಂದ ತೋಟಗಳಲ್ಲಿಯೇ ಹೂವು ಬಿಡುವಂತಾಗಿದೆ. ತೋಟಗಳಲ್ಲಿ ಗಿಡಗಳ ಸಮೇತ ಕಿತ್ತು ಹಾಕಲಾಗುತ್ತಿದೆ. ಮಾರುಕಟ್ಟೆಗೆ ಹೋದರೆ ವ್ಯಾಪಾರವಾಗದೆ ರಸ್ತೆ ಬದಿ ಸುರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇಪದೆ ನಷ್ಟ ಅನುಭವಿಸುತ್ತಿರುವವರು ಮತ್ತೆ ಹೂವು ಬೆಳೆಯದಂತೆ ಶಪಥ ಮಾಡಿದ್ದಾರೆ.
ಪ್ರಸ್ತುತ 2 ದಿನಗಳಿಂದ ಅಲ್ಪಮಟ್ಟಿಗೆ ಏರಿಕೆ ಕಂಡಿದ್ದು, ಗುಣಮಟ್ಟದ ಸೇವಂತಿಗೆ ಕೆ.ಜಿ.ಗೆ 100 ರೂ.ಗಳ ತನಕ ಮಾರಾಟವಾಗುತ್ತಿದೆ. ಚೆಂಡು ಹೂ 10 ರೂ.ನಿಂದ 20 ರೂ., ಬಟನ್ ರೋಜ್ 130ರ ತನಕ ಮಾರಾಟವಾಗುತ್ತಿದೆ. ಹಬ್ಬ ಮುಗಿದ ದಿನ ಸಂಜೆಯೇ ಇದು ಏಕಾಏಕಿ ಇಳಿಕೆ ಕಾಣುತ್ತಿದೆ. ಸರ್ಕಾರ ಮಧ್ಯ ಪ್ರವೇಶಿಸಿ, ಹೂವು ಬೆಳೆಗಾರರಿಗೆ ಆಗಿರುವ ನಷ್ಟ ತುಂಬಬೇಕು ಎಂದು ಹೂ ಬೆಳೆಗಾರರು ಆಗ್ರಹಿಸಿದ್ದಾರೆ.
ಅಗತ್ಯಕ್ಕಿಂತ ಹೆಚ್ಚಾಗಿ ರೈತರು ಮಾರುಕಟ್ಟೆಗೆ ಹೂವು ತರುತ್ತಿದ್ದಾರೆ. ಮಳೆ ಇರುವ ಕಾರಣ ಬೇರೆ ರಾಜ್ಯಗಳಿಗೆ ರ್ತು ಮಾಡಲು ಸಾಧ್ಯವಾಗುತ್ತಿಲ್ಲ. ಆಂಧ್ರಪ್ರದೇಶಕ್ಕೆ ಬಸ್ಗಳ ಮೇಲೆ ಹೂವು ರಪ್ತು ಮಾಡಲಾಗುತ್ತಿದೆ. ಮಳೆ ಹೆಚ್ಚು ಇರುವ ಕಾರಣ ಹೂವು ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಬೆಲೆಯೂ ಕುಸಿಯುತ್ತಿದೆ. | ವೆಂಕಟೇಶ್ ಹೂವಿನ ವ್ಯಾಪಾರಿ ಕೋಲಾರ ಸೇವಂತಿಗೆ ನಾರನ್ನು ನಾಟಿ ಮಾಡಿದರೆ 3 ತಿಂಗಳಿಗೆ ಕಟಾವಿಗೆ ಬರುತ್ತದೆ. 3 ತಿಂಗಳ ಕಾಲ ಹೂ ಸಿಗುತ್ತದೆ. 1 ಎಕರೆಯಲ್ಲಿ ಹೂವು ಬೆಳೆಯಲು 1.50 ಲಕ್ಷ ರೂ. ಖರ್ಚು ಮಾಡಬೇಕು. ಚೆಂಡು ಹೂ ಬೆಳೆಯಲು ಎಕೆರೆಗೆ 1 ಲಕ್ಷ ರೂ. ರ್ಖಚಾಗುತ್ತದೆ. 2 ತಿಂಗಳ ಕಾಲ ಹೂವು ಕೈಗೆ ಸಿಗುತ್ತದೆ. ಈ ಮಧ್ಯೆ ಹೂವಿಗೆ ಉತ್ತಮ ಬೆಲೆ ಬಾರದೆ ಇದ್ದರೆ ಅಸಲು ಕೂಡ ಸಿಗುವುದಿಲ್ಲ. 6 ತಿಂಗಳಿಂದ ಹೂವಿಗೆ ಬೆಲೆಯೆ ಬರುತ್ತಿಲ್ಲ. ಸರ್ಕಾರ ಹೂ ಬೆಳೆಗಾರರಿಗೆ ಬೆಂಬಲ ಬೆಲೆಯ ಜತೆಗೆ ಪರಿಹಾರ ನೀಡಬೇಕಿದೆ. | ನಿತಿನ್ ಅರಾಭಿಕೊತ್ತನೂರು ಹೂವು ಬೆಳೆಗಾರ