ದೇಶದ ಸೈನಿಕರ ಶೌರ್ಯ ಸ್ಮರಣೀಯ

Untitled design (2)
ಹೂವಿನಹಡಗಲಿ ಶಿವಶಾಂತವೀರ ಸಮುದಾಯ ಭವನದಲ್ಲಿ ವಿಜಯನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ರಜತ ಮಹೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಉದ್ಘಾಟಿಸಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಚ್.ಪೂಜಪ್ಪ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಈಟಿ ಲಿಂಗರಾಜ ಇತರರಿದ್ದರು.
Published on

ಹೂವಿನಹಡಗಲಿ: ನಾವು ನೆಮ್ಮದಿಯಿಂದಿರಲು ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಸೈನಿಕರಿಂದ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್ ಹೇಳಿದರು.

ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ವಿಜಯನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಗಡಿ ಸೈನಿಕರ ಪರಿಶ್ರಮದಿಂದ ಭಾರತ ಸುಭಿಕ್ಷೆವಾಗಿದೆ ಎಂದರು.

ದೇಶದ ಸೈನಿಕರ ಶೌರ್ಯ ಮತ್ತು ತ್ಯಾಗ ನಾವೆಲ್ಲರೂ ಸಂತಸದದಿಂದ ಇರಲು ಕಾರಣವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರ ಮರಣಹೊಂದಿದವರ ಕುಟುಂಬಳಿಗೆ ನಾವು ಋಣಿಯಾಗಿರಬೇಕು ಎಂದರು.

ಯುವ ಬ್ರಿಗೇಡ್ ಸಂಚಾಲಕ ಶರಣಗೌಡ ಪಾಟೀಲ್ ಉಪನ್ಯಾಸದಲ್ಲಿ ಮಾತನಾಡಿ, ದೇಶದ ಸೈನಿಕರ ಸಾಹಸ, ತ್ಯಾಗ ಹಾಗೂ ಬಲಿದಾನದಿಂದ ಕಾರ್ಗಿಲ್ ಯುದ್ಧದಲ್ಲಿ ಜಯ ಸಾಧಿಸಲು ಸಾಧ್ಯವಾಯಿತು. ಯುದ್ಧದಲ್ಲಿ ರಾಜ್ಯದ ಸೈನಿಕ ಕೊಡುಗೆಯೂ ಹೆಚ್ಚಿನ ಮಟ್ಟದಲ್ಲಿದೆ. ಕಾರ್ಗಿಲ್‌ಯುದ್ಧಕ್ಕೆ ತೆರಳುವ ಮುನ್ನ ಅವರು ಬರೆದಿಟ್ಟಿದ್ದ ಪತ್ರಗಳು ಯುವ ಜನತೆಯಲ್ಲಿ ದೇಶಾಭಿಮಾನ ಮತ್ತು ಜೀವನ ಸ್ಫೂರ್ತಿಗೆ ಶಕ್ತಿ ತುಂಬುತ್ತವೆ ಎಂದರು.

ಜಿಲ್ಲಾ ಪ್ರಕೋಷ್ಠ ಸಹಸಂಚಾಲಕ ಓದೋ ಗಂಗಪ್ಪ ಹಾಗೂ ನಿವೃತ್ತ ಸೈನಿಕ ಪ್ರಸನ್ನಗೌಡ ಮಾತನಾಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಹಣ್ಣಿ ಶಶಿಧರ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪುನೀತ್ ದೊಡ್ಡಮನಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಚ್.ಪೂಜಪ್ಪ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಈಟಿ ಲಿಂಗರಾಜ ಹಾಗೂ ಬಿಜೆಪಿಯ ಇತರ ಪದಾಧಿಕಾರಿಗಳು ಹಾಗೂ ನಿವೃತ್ತ ಯೋಧರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net