

ವಿಜಯವಾಣಿ ಸುದ್ದಿಜಾಲ ವಿಜಯಪುರ
ಇಲ್ಲಿನ ಶ್ರೀ ರೇಣುಕಾ ಯಲ್ಲಮ್ಮದೇವಿಯ 85ನೇ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಆರತಿ ಅಗ್ನಿಕುಂಡ ಪ್ರವೇಶ, ಕೀಲು ಕುದುರೆ, ಗಾರುಡಿ ವೇಷ, ನವಿಲು ಕುಣಿತ, ವಸಂತೋತ್ಸವ, ಭಾರತ ಓದುವುದು, ಗಾವು ಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು.
ಹೂವಿನ ಕರಗವನ್ನು ಪ್ರತಿ ವರ್ಷದಂತೆ ಜೆ.ಆರ್.ದೇವರಾಜ್ ಅವರು ಆಕರ್ಷಕ ನೃತ್ಯದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಹೊತ್ತು ಸಾಗಿದರು. ಭಾರತದ ಪೂಜಾರಿಯಾಗಿ ಎಂ.ಕೆ.ಅನಂತಕುಮಾರ್ ಕಾರ್ಯ ನಿರ್ವಹಿಸಿದರು. ಕಣದ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಚಾಲಕ ಕಟ್ಟಾ ಸುಬ್ರಮಣ್ಯನಾಯ್ಡು ಭಾಗವಹಿಸಿದರು. ವಿಜಯಪುರ ಟೌನ್ ಕರಗದ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯಕ್ಕೆ ಆದಿಶಕ್ತಿ ಮಹಾಸಂಸ್ಥಾನ ವಹ್ನಿಕುಲ ಕ್ಷತ್ರಿಯರ ಪೀಠಾಧಿಪತಿ ಶ್ರೀ ಪ್ರಣವಾನಂದ ಪುರಿ ಸ್ವಾಮೀಜಿ ಭೇಟಿ ನೀಡಿ, ಆಶೀರ್ವದಿಸಿದರು.
ವಿಶೇಷವಾಗಿ ಹಲವು ದೇವರುಗಳ ಹೂವಿನ ಹಾಗೂ ಮುತ್ತಿನ ಪಲ್ಲಕ್ಕಿ ನಡೆಯಿತು.
ಬಿಜೆಪಿ ಟೌನ್ ಪ್ರಧಾನ ಕಾರ್ಯದರ್ಶಿ ಮುನೀಂದ್ರ, ಒಬಿಸಿ ಜಿಲ್ಲಾಧ್ಯಕ್ಷ ಕನಕರಾಜು, ಕರಗದ ಪೂಜಾರಿ ಜೆ.ಎನ್.ಶ್ರೀನಿವಾಸ್, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಡಿ.ಮಂಜುನಾಥ್, ಗೌರವ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಎಂ.ಚನ್ನಕೃಷ್ಣ, ಖಜಾಂಚಿ ಜೆ.ಎಲ್.ಸೋಮಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಆರ್.ಮುನಿವೀರಣ್ಣ, ಪುರಸಭೆ ಉಪಾಧ್ಯಕ್ಷ ಎಂ.ಕೇಶವಪ್ಪ, ಪೂಜಾರಿ ಜೆ.ವಿ.ರಾಮಾಂಜಿನಪ್ಪ, ಭಾರತದ ಪೂಜಾರಿ ಮುನಿಶಾಮಪ್ಪ ಹಾಗೂ ಎಂ.ಕೆ.ಅನಂತಕುಮಾರ್, ಜೆ.ವಿ.ಲಕ್ಷ್ಮೀನಾರಾಯಣಪ್ಪ, ಗೌಡ್ರು ಮಂಜುನಾಥ್, ಗಣಾಚಾರಿ, ಮುನಿರಾಜು, ಜೆ.ವಿ.ವೆಂಕಟೇಶ್, ಕೆ.ಚನ್ನಪ್ಪ ಇದ್ದರು.