ತಿ.ನರಸೀಪುರ ತಾಲೂಕು ಆಡಳಿತದಿಂದ ಪುಷ್ಪಾರ್ಚನೆ

06 july tnp 01
ತಿ.ನರಸೀಪುರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಭಾನುವಾರ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯ ಸ್ಮರಣೆ ನಡೆಯಿತು. ಟಿ.ಜಿ.ಸುರೇಶಾಚಾರ್, ಹೊನ್ನನಾಯಕ, ಆರ್.ಅರ್ಜುನ್, ಮಹದೇವಯ್ಯ, ಸಿದ್ದರಾಜು, ಡಿ.ಶಂಕರ್, ಬಿ.ಮರಯ್ಯ, ರಾಮಲಿಂಗಯ್ಯ, ಹುಣಸೂರು ಬಸವಣ್ಣ ಇತರರು ಇದ್ದರು.
Published on

ತಿ.ನರಸೀಪುರ: ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಭಾನುವಾರ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯ ಸ್ಮರಣೆ ಆಯೋಜಿಸಲಾಗಿತ್ತು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಪುಣ್ಯಸ್ಮರಣೆಯಲ್ಲಿ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿ ತಾಲೂಕು ಆಡಳಿತದಿಂದ ಗೌರವ ಸಲ್ಲಿಸಲಾಯಿತು.

ತಾಲೂಕು ಬಾಬೂಜಿ ಸಂಘದ ಅಧ್ಯಕ್ಷ ಆರ್.ಅರ್ಜುನ್ ಮಾತನಾಡಿ, ಸುದೀರ್ಘ ಅವಧಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ, ಉಪ ಪ್ರಧಾನಿ ಆಗಿದ್ದ ಡಾ.ಬಾಬು ಜಗಜೀವನ್ ರಾಮ್ ಅವರು ದೇಶದ ಅಭಿವೃದ್ಧಿಗೆ ಮಾಡಿದಂತಹ ಉತ್ತಮ ಕಾರ್ಯಗಳನ್ನು ಸ್ಮರಿಸಿ, ಗೌರವಿಸಬೇಕು. ಅಧಿಕಾರದಲ್ಲಿದ್ದಾಗ ಸಂವಿಧಾನದ ರಕ್ಷಕರಾಗಿದ್ದರು. ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರದ ಕೊರತೆ ನೀಗಿಸಿ, ರಕ್ಷಣಾ ಸಚಿವರಾಗಿ ಭದ್ರತೆಯ ಮಟ್ಟವನ್ನು ಸುಧಾರಿಸಿದ ಮಹಾನ್ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.

ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಹುಣಸೂರು ಬಸವಣ್ಣ, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಹಾಗೂ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಹೊನ್ನನಾಯಕ, ಜನಕಲ್ಯಾಣ ಸಂಘದ ಅಧ್ಯಕ್ಷ ಡಿ.ಶಂಕರ್, ತಾ.ಪಂ ಮಾಜಿ ಸದಸ್ಯ ರಾಮಲಿಂಗಯ್ಯ, ಕೆಪಿಸಿಸಿ ಅಲ್ಪಸಂಖ್ಯಾತರ ಕಾರ್ಯದರ್ಶಿ ಡಾ.ಬಿ. ಮನ್ಸೂರ್ ಆಲಿ, ಸಮಾಜ ಕಲ್ಯಾಣ ಅಧಿಕಾರಿ ವಿನೂತನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಬಿಸಿಎಂ ವಿಸ್ತರಣಾಧಿಕಾರಿ ಎಂ.ರಾಜಣ್ಣ, ಲೋಕೋಪಯೋಗಿ ಎಇಇ ಎಸ್.ಸತೀಶ್ ಚಂದ್ರನ್, ಯೋಜನಾಧಿಕಾರಿ ರಂಗಸ್ವಾಮಿ, ಮುಖಂಡರಾದ ಮೂಗೂರು ಸಿದ್ದರಾಜು, ಸಿ.ಪುಟ್ಟಯ್ಯ, ಸಿ.ಪುಟ್ಟಮಲ್ಲಯ್ಯ, ಸಿ.ಡಿ.ವೆಂಕಟೇಶ್, ಪುಟ್ಟಸ್ವಾಮಿ, ಹೊಸಹಳ್ಳಿ ಮಾದೇಶ್, ವಿಜಾಪುರ ಶಿವಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net