

ಹೂವಿನಹಡಗಲಿ: ಸುಕ್ಷೇತ್ರ ಮೈಲಾರ ಬಳಿ ತುಂಗಭದ್ರಾ ನದಿಯಲ್ಲಿ ಮುಳುಗಿ ವೃದ್ಧ ಗುರುವಾರ ಮೃತಪಟ್ಟಿದ್ದಾರೆ. ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೃದ್ಧ ಆಳವಾದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜನರು ಕೂಗಾಡಿದಾಗ ಸ್ಥಳದಲ್ಲಿದ್ದ ದೋಣಿಯ ಸಿಬ್ಬಂದಿ ವೃದ್ಧನ ಮೃತದೇಹ ಹೊರತೆಗೆದಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಹಿರೇಹಡಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ನದಿಯಲ್ಲಿ ಭಕ್ತಾದಿಗಳ ಸುರಕ್ಷತೆಗಾಗಿ ಎರಡು ದೋಣಿ ಹಾಗೂ ಕೆಲ ಈಜುಗಾರರನ್ನು ನಿಯೋಜಿಸಿದ್ದರೂ ಅವಘಡ ನಡೆದಿದೆ.