ಮೂವರು ಮನೆಗಳ್ಳರ ಬಂಧನ

crime harapanahalli
Published on

ಹೂವಿನಹಡಗಲಿ: ಇಟ್ಟಿಗಿ ಗ್ರಾಮದಲ್ಲಿ ಮೇ 1 ರಂದು ರಾತ್ರಿ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಎ.ಸಾದಿಕ್ (21), ಹರಿಹರ ತಾಲೂಕು ದೊಡ್ಡಬಾತಿ ಗ್ರಾಮದ ಎಂ.ಸಿ.ಮುಬಾರಕ್ (21), ಜುಬೇರ (25) ಬಂಧಿತರು. ಇಟ್ಟಿಗಿ ಗ್ರಾಮದ ರಾಜಶೇಖರಪ್ಪ ಅವರ ಮನೆಯಲ್ಲಿ 4.80 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನಾಭರಣ, 70 ಸಾವಿರ ರೂ. ನಗದು ಕಳ್ಳತನ ಮಾಡಿದ್ದರು. ಇಟ್ಟಿಗಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಬಂಧಿತರಿಂದ ಪೊಲೀಸರು 1.60 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಎ.ಸಾದಿಕ್ ವಿರುದ್ಧ ದಾವಣಗೆರೆ ಗ್ರಾಮಾಂತರ, ಬಸವನಗರ, ಬಿಳಿಚೋಡು ಠಾಣೆಗಳಲ್ಲಿ 12 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net