ಗೋಲ್‌ಗಪ್ಪ ತಯಾರಿಸಲು ಹಿಟ್ಟು ತುಳಿದ!

kpp golguppa
ಕೊಪ್ಪದಲ್ಲಿ ಗೋಲ್‌ಗಪ್ಪ ತಯಾರಿಸಲು ಹಿಟ್ಟನ್ನು ತುಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು.
Published on

ಕೊಪ್ಪ: ಪಟ್ಟಣದ ಬಸ್ ನಿಲ್ದಾಣ ಸಮೀಪ ಇರುವ ಗೋಲ್‌ಗಪ್ಪ ಅಂಗಡಿಯಲ್ಲಿ ಗೋಲ್‌ಗಪ್ಪ ತಯಾರು ಮಾಡುವಾಗ ಹಿಟ್ಟನ್ನು ಕಾಲಿನಲ್ಲಿ ತುಳಿದಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ವೈರಲ್ ಆಗಿದೆ.

ಗೋಲ್‌ಗಪ್ಪ ತಯಾರಿಸಲು ಹಿಟ್ಟನ್ನು ತುಳಿದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತವಾಗಿದ್ದು, ಅಂಗಡಿ ಮಾಲೀಕನ ವಿರುದ್ಧ ಕ್ರಮ ಜರುಗಿಸುವಂತೆ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಅಂಕಿತಾಗೆ ಮನವಿ ಮಾಡಿದ್ದಾರೆ.
ಪಟ್ಟಣದ ಕೊಳಚೆ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆದು ಗೋಲ್‌ಗಪ್ಪ ಮಾರಾಟ ಮಾಡುತ್ತಾರೆ. ಇದರಿಂದ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಬೀದಿ ಬದಿ ವ್ಯಾಪಾರ ಮಾಡುವ ಪಾನಿಪೂರಿ, ಕಬಾಬ್ ಕಾರ್ನರ್, ಹಲವು ಅಂಗಡಿಗಳು ರಾಸಾಯನಿಕ ಕಲಬೆರಕೆ ಮಾಡುತ್ತಾರೆ. ಇವರ ಪರವಾನಗಿ ಪರಿಶೀಲಿಸಬೇಕು ಮತ್ತು ಗುಣಮಟ್ಟ ಪರೀಕ್ಷೆ ನಡೆಸಿ ತಪ್ಪಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿ ಚಂದ್ರಕಾಂತ್ ಅವರನ್ನು ಗಾರ್ಬೇಜ್ ಟೂ ಗಾರ್ಡನ್ ಕೊಪ್ಪ ಬಳಗ ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net