ಹೂಗಾರ ಮಾದಯ್ಯಆದರ್ಶ ರೂಢಿಸಿಕೊಳ್ಳಿ

23 KURGOUD 04
ಕುರುಗೋಡಿನಲ್ಲಿ ತಾಲೂಕು ಹೂಗಾರ ಸಮಾಜದಿಂದ ಶರಣ ಹೂಗಾರ ಮಾದಯ್ಯ ಭಾವಚಿತ್ರ ಮೆರವಣಿಗೆ ನಡೆಯಿತು.
Published on

ಕುರುಗೋಡು: ಕಾಯಕ ತತ್ವದ ಮೂಲಕ ವಿಶ್ವಗುರು ಬಸವಣ್ಣನವರ ಮನಸ್ಸು ಗೆದ್ದ ಶಿವಶರಣ ಹೂಗಾರ ಮಾದಯ್ಯ ಆದರ್ಶ ಯುವ ಜನರು ಮೈಗೂಡಿಸಿಕೊಳ್ಳಬೇಕು ಎಂದು ಹೂಗಾರ ಸಮಾಜದ ತಾಲೂಕು ಅಧ್ಯಕ್ಷ ಯೋಗೀಶ್ ಹೂಗಾರ ಹೇಳಿದರು.

ಪಟ್ಟಣದ ದೊಡ್ಡ ಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ತಾಲೂಕು ಹೂಗಾರ ಸಮಾಜ ಹಮ್ಮಿಕೊಂಡಿದ್ದ ಶರಣ ಹೂಗಾರ ಮಾದಯ್ಯ ಜಯಂತಿ ಮೆರವಣಿಗೆಯಲ್ಲಿ ಮಾತನಾಡಿದರು.

ಕಳಸ ಹೊತ್ತ ಮುತ್ತೈದೆಯರ ಸಮೇತ ಡೊಳ್ಳು ಕುಣಿತ, ಸುಮಾಳ ವಾದ್ಯದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಶರಣ ಮಾದಯ್ಯ ಹೂಗಾರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಜೀರ್ ಮಲ್ಲಿಕಾರ್ಜುನ, ಡಾ.ಸೋಮಶೇಖರ್, ಯೋಗೇಶ್, ಎರ‌್ರಿಸ್ವಾಮಿ, ಕರ್ಣ, ಬಸವರಾಜ್, ಮಹಾಬಲೇಶ್ವರ, ಗವಿಸಿದ್ದಪ್ಪ, ರುದ್ರಪ್ಪ, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net