ಯೋಧ ಅನೂಪ್ ಪೂಜಾರಿಗೆ ಪುಷ್ಪನಮನ

kota-1
Published on

ಕೋಟ: ಕರಾವಳಿ ಉದ್ದಗಲಕ್ಕೆ ಸಹಸ್ರ ಸಂಖ್ಯೆಯಲ್ಲಿ ನೆರೆದು ಪುಷ್ಪನಮನ ಸಲ್ಲಿಸಿ, ಅಶ್ರು ತರ್ಪಣ ನೀಡುವ ಮುಖೇನ ತಮ್ಮ ಮನೆಯ ಮಗನಂತೆ ಸಾರ್ವಜನಿಕರು ಭಾಗವಹಿಸಿರುವುದು ಮರೆಯಲಾರದ ಸಂಗತಿ. ಯೋಧ ಅನೂಪ್ ಪೂಜಾರಿ ಸಾವು ಕರಾವಳಿಗೆ ಕರಾಳದಿನ ಎಂದು ಮಾಜಿ ಜಿಪಂ ಸದಸ್ಯ ಗಣಪತಿ ಟಿ.ಶ್ರೀಯಾನ್ ಹೇಳಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ಆಶ್ರಯದಲ್ಲಿ ಗುರುವಾರ ಯೋಧ ಅನೂಪ್ ಪೂಜಾರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಡಾ.ಆದರ್ಶ ಹೆಬ್ಬಾರ್, ಪತ್ರಕರ್ತ ಯು.ಎಸ್.ಶಣೈ, ಕಲಾ ಸಾಹಿತಿ ಜನಾರ್ದನ ಹಂದೆ, ಉಪನ್ಯಾಸಕ ಸುಜಯೀಂದ್ರ ಹಂದೆ ಉಪಸ್ಥಿತರಿದ್ದರು. ಸಂಸ್ಥೆ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net