ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರಿಗೆ ಸನ್ಮಾನ: ಫ್ಲೋರ್‌ಬಾಲ್ ಪಂದ್ಯಾವಳಿಗೆ ಬೀಳ್ಕೊಡುಗೆ

11_01_Mdy_01(Sports)
Published on

ಮಂಡ್ಯ: ರಾಷ್ಟ್ರೀಯ ಫ್ಲೋರ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾದ ಜಿಲ್ಲೆಯ ಆಟಗಾರ್ತಿಯರನ್ನು ಬುಧವಾರ ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಹಾಗೂ ಜಿಲ್ಲಾ ಫ್ಲೋರ್‌ಬಾಲ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಜ.15ರಿಂದ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪ್ರಾರಂಭವಾಗುವ ಟೂರ್ನಿಗೆ ಬೀಳ್ಕೊಡುಗೆ ನೀಡಲಾಯಿತು.

ರಾಜ್ಯದಿಂದ 13 ವಿದ್ಯಾರ್ಥಿಗಳು ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಈ ಪೈಕಿ ಮಂಡ್ಯದ ಎಸ್.ಸುಕೃತಿ, ಸಿ.ವೈ.ದೀಪಿಕಾ, ಬಿ.ಆರ್.ಸಾನಿಕಾ, ಮುಸ್ಕಾನ್ ಇದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಅಸೋಸಿಯೇಷನ್ ಕಚೇರಿಯಲ್ಲಿ ಸನ್ಮಾನಿಸಿ ಪ್ರಯಾಣದ ವೆಚ್ಚವಾಗಿ 10 ಸಾವಿರ ರೂ.ಗಳನ್ನು ಮಾಂಡ್ಯ ಎಕ್ಸಲೆನ್ಸ್ ಪಿಯು ಕಾಲೇಜಿನ ಪಾಲುದಾರರಾದ ಶ್ರೀನಿವಾಸ್ ಮತ್ತು ಎಂ.ಆರ್.ಮಂಜು ನೀಡಿದರು.

ಎಂ.ಆರ್.ಮಂಜು ಮಾತನಾಡಿ, ಜಿಲ್ಲೆಯ ನಾಲ್ವರು ಆಯ್ಕೆಯಾಗಿರುವುದು ಸಂತಸದ ವಿಷಯ. ಫ್ಲೋರ್‌ಬಾಲ್ ಆಟಗಾರರನ್ನು ಮತ್ತಷ್ಟು ತಯಾರು ಮಾಡಲು ಮಂಡ್ಯ ನಗರದಲ್ಲಿ ಒಂದು ಕ್ರೀಡಾಂಗಣದ ಅವಶ್ಯಕತೆ ಇದ್ದು, ಈ ಸಂಬಂಧವಾಗಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಜತೆ ಮಾತನಾಡಿ ಸ್ಥಳವನ್ನು ಪಡೆಯಲಾಗುವುದು. ಇಲ್ಲದೆ ಹೋದಲ್ಲಿ ಖಾಸಗಿಯಾಗಿ ಯಾರಾದರೂ 30 ವರ್ಷ ಗುತ್ತಿಗೆಗೆ ನೀಡಿದರೆ ಕ್ರೀಡಾಂಗಣವನ್ನು ಸ್ಥಾಪಿಸಲಾಗುವುದು ಎಂದರು.

ಅಸೋಸಿಯೇಷನ್‌ನ ಉಪಾಧ್ಯಕ್ಷ ಬಿ.ಟಿ.ಮೋಹನ್‌ಕುಮಾರ್, ಕಾರ್ಯದರ್ಶಿ ಉಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net