

ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಸಿದ್ಧಾರೂಢ ಮಠದ ಹತ್ತಿರ 11 ಕೆವಿ ವಿದ್ಯುತ್ ತಂತಿ ತುಂಡರಿಸಿ ಕಸದ ಮೇಲೆ ಬಿದ್ದ ಪರಿಣಾಮ ಬೆಂಕಿ ಹತ್ತಿದ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶ ವಿದ್ಯುತ್ ತಂತಿ ಹರಿದು ಬಿದ್ದಾಗ ಯಾರು ಇರಲಿಲ್ಲ.
ಹಾಗಾಗಿ ಯಾವುದೇ ಅವಘಡ ಸಂಭವಿಸಿಲ್ಲ. ವಿದ್ಯುತ್ ವೈರ್ ಹರಿದು ಬಿದ್ದ ಸ್ಥಳದಲ್ಲಿ ಜನ ತಿರುಗಾಡುವ ಸ್ಥಳವಾಗಿದೆ. ಘಟನೆ ನಡೆದ ಕೂಡಲೇ ಜೆಸ್ಕಾಂಗೆ ಮಾಹಿತಿ ನೀಡಿದ ಪರಿಣಾಮ ವಿದ್ಯುತ್ ಸಂಪರ್ಕ ಖಡಿತಗೊಳಿಸಲಾಗಿದೆ.