

ರಾಮದುರ್ಗ: ಸರ್ಕಾರ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸಾಕಷ್ಟು ವೆಚ್ಚ ಮಾಡುತ್ತಿದ್ದರೂ ಬನ್ನೂರ ತಾಂಡಾ(ಸಕೋರ್ಟ ದೇವಾಪೂರ) ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕುಡಿಯುವ ನೀರಿಗಾಗಿ ಜನತೆ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಜನಪ್ರತಿನಿಗಳಾಗಲಿ, ಗ್ರಾಪಂ ಅಭಿವೃದ್ಧಿ ಅಕಾಧಿರಿಗಳಾಗಲಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಗ್ರಾಮದಿಂದ ಹೊರ ವಲಯದ ಮುಖ್ಯ ರಸ್ತೆಯ ಇಳಿಮುಖವಾಗಿ ಪಕ್ಕದ ರಸ್ತೆಯ ಬದಿಯಲ್ಲಿ ಒಂದು ಟ್ಯಾಂಕ್ ಇದ್ದು, ದಿನವೂ ಸರತಿ ನಿಂತು ನೀರು ತುಂಬುವುದು ಕಷ್ಟವಾಗಿದೆ. ಕುಡಿಯುವ ನೀರಿಗಾಗಿಯೇ ಕೂಲಿ-ನಾಲಿ ಬಿಟ್ಟು ದಿನವಿಡೀ ನೀರು ತುಂಬುವ ಅನಿವಾರ್ಯತೆ ಎದುರಾಗಿದೆ. ತಳ್ಳುವ ನೀಡಿನ ಗಾಡಿಗಳಿಂದ ನೀರು ತರಲು ವಯೋವದ್ಧರು ಹಾಗೂ ಚಿಕ್ಕ ಮಕ್ಕಳು ಹರಸಾಹಸ ಪಡಬೇಕಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ರಾಮಕ್ಕೆ ಕಳೆದ ಒಂದು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಕುರಿತು ಸ್ಥಳೀಯ ಪಿಡಿಒಗೆ ಸಾಕಷ್ಟು ಬಾರಿ ಲಿಖಿತ ಹಾಗೂ ವೌಖಿಕವಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಾಳೆ ಬಗೆಹರಿಸುತ್ತೇವೆ ಎಂಬ ಉತ್ತರ ನೀಡುತ್ತಲೇ ಸಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಲಜೀವನ ಕಾಮಗಾರಿ ಸಂಪರ್ಕವೂ ಇಲ್ಲ: ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮಕ್ಕೆ ಮನೆ ಮನೆಗಳಿಗೆ ನಳಗಳ ಸಂಪರ್ಕ ಕಾಮಗಾರಿಯನ್ನು ಮಾಡಿದ್ದಾರೆ. ಆದರೆ, ಇದುವರೆಗೂ ಏರ್‌ಟ್ಯಾಂಕ್ ನಿರ್ಮಿಸಿಲ್ಲ. ಕಾಮಗಾರಿಗೆ ನಳ ಸಂಪರ್ಕ ನೀಡಿಲ್ಲ. ಕಾಮಗಾರಿಯೂ ಸಹ ಆಮೆಗತಿಯಲ್ಲಿ ನಡೆದಿದೆ ಎಂದು ಸ್ಥಳೀಯರಾದ ಕಷ್ಣಪ್ಪ ಚವ್ಹಾಣ, ಗೋಪಿ ರಾಠೋಡ, ಸಾಗರ ಪೂಜಾರ, ಚೇತನ ಪಮ್ಮಾರ, ರುಕ್ಮವ್ವ ಜಾಧವ, ರವಿ ರಾಠೋಡ ದೂರಿದ್ದಾರೆ.
ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಯಾರೂ ಇತ್ತ ಕಡೆ ಗಮನ ಹರಿಸಿಲ್ಲ. ನಮ್ಮ ಗೋಳು ಯಾರೂ ಕೇಳುವವರು ಇಲ್ಲದಾಗಿದೆ. ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕು. ಗಂಗವ್ವ ಚವ್ಹಾಣ,ಗ್ರಾಮದ ವಯೋವೃದ್ಧೆ
ಗಂಗವ್ವ ಚವ್ಹಾಣ,ಗ್ರಾಮದ ವಯೋವೃದ್ಧೆ
ಬನ್ನೂರ ತಾಂಡೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಗ್ರಾಪಂ ಅಭಿವದ್ಧಿ ಅಕಾರಿಗಳೊಂದಿಗೆ ಚರ್ಚಿಸಿ, ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಹಾರಕ್ಕೆ ಶೀಘ್ರ ಕ್ರಮ ತೆಗೆದುಕೊಳ್ಳುತ್ತೇನೆ. ಪ್ರವೀಣಕುಮಾರ ಸಾಲಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ
ಪ್ರವೀಣಕುಮಾರ ಸಾಲಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ