

ಬೆಳಗಾವಿ: ಭೀಕರ ನೆರೆ ಹಾವಳಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಸುತ್ತಲಿನ ಪ್ರದೇಶಗಳ 45ಕ್ಕೂ ಹೆಚ್ಚು ಗ್ರಾಮಗಳ ಚೌತಿ ಸಂಭ್ರಮವನ್ನೇ ಕಸಿದಿದೆ.
ಊರಿಡೀ ನೀರು ತುಂಬಿಕೊಂಡಿರುವ ಪರಿಣಾಮ ಹಲವರು ಸರ್ಕಾರದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರೆ ಇನ್ನೂ ಕೆಲವರು ಅಲ್ಲಲ್ಲಿ ಟೆಂಟ್ ಹಾಕಿಕೊಂಡಿದ್ದಾರೆ. ನೆರೆ ಜತೆಗೆ ಕರೊನಾ ಹಾವಳಿ, ಆರ್ಥಿಕ ಸಮಸ್ಯೆ ಕಾರಣಕ್ಕೆ ಗಣೇಶ ಚತುರ್ಥಿ ಆಚರಿಸದಿರಲು ಬಹುತೇಕರು ತೀರ್ವನಿಸಿದ್ದಾರೆ. ಕಳೆದ ವರ್ಷ ಸಹ 2 ತಿಂಗಳು ಪ್ರವಾಹ ಕಾಡಿದ್ದರಿಂದ ಸಂತ್ರಸ್ತರು ಹಬ್ಬ ಆಚರಿಸಿರಲಿಲ್ಲ.