

ಧಾರವಾಡ: ಕೆಲ ದಿನಗಳಿಂದ ಮುಂಗಾರು ಮಳೆಯಾಗುತ್ತಿದೆ. ಆರಂಭಿಕ ಮಳೆಗೆ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ತುಪ್ಪರಿ ಹಳ್ಳ ಹಾಗೂ ಬೆಣ್ಣಿ ಹಳ್ಳದ ಪ್ರವಾಹ ತಲೆದೋರಿದೆ. ಮನೆಗಳಿಗೂ ಹಾನಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇನಾಮಹೊಂಗಲ- ಹಾರೋಬೆಳವಡಿ ನಡುವಿನ ಸೇತುವೆ, ಹನಸಿ, ಶಿರಕೋಳ, ಬಳ್ಳೂರ, ಶಿರೂರು ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಭೇಟಿ ನೀಡಿದರು. ಹನಸಿ- ಶಿರಕೋಳ ನಡುವಿನ ತುಪ್ಪರಿ ಹಳ್ಳದ ಹರಿವಿನ ತೀವ್ರತೆಯಿಂದ ಜಮೀನುಗಳಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ತಿರ್ಲಾಪುರ- ಅಳಗವಾಡಿ ಗ್ರಾಮದ ನಡುವೆ ತುಪ್ಪರಿ ಹಳ್ಳವು ಬೆಣ್ಣಿ ಹಳಕ್ಕೆ ಕೂಡುವಲ್ಲೂ ಆದ ಹಾನಿಯನ್ನು ಸಚಿವರು ವೀಕ್ಷಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಲಾಡ್, 2019ರಲ್ಲಿ ಸರ್ಕಾರದ ಅನುದಾನದಲ್ಲಿ ಹೂಳು ತೆಗೆಯುವುದು, ಬದುವು ಎತ್ತರಿಸುವುದು ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೂ ಮಳೆ ನೀರು ಗ್ರಾಮಗಳಿಗೆ ಹಾಗೂ ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟು ಹಾನಿಯಾಗುತ್ತಿದೆ. ಮೇಲ್ಸೇತುವೆಯನ್ನು ವೈಜ್ಞಾನಿಕವಾಗಿ ಎತ್ತರಿಸುವುದು ಹಾಗೂ ಅಗತ್ಯವಿದ್ದಲ್ಲಿ ಬ್ಯಾರೇಜ್‌ಗಳನ್ನು ನಿರ್ಮಿಸಿ ತೊಂದರೆಯಾಗದAತೆ ಕ್ರಮ ಕೈಗೊಳ್ಳಲಾಗುವುದು. ತುಪ್ಪರಿಹಳ್ಳ 65 ಕಿ.ಮೀ., ಬೆಣ್ಣಿ ಹಳ್ಳ 140 ಕಿ.ಮೀ. ಹರಿದಿದೆ. ಹಳ್ಳದಗುಂಟ ಹಾನಿಯಾಗುತ್ತಿವೆ. ಹಳ್ಳಗಳಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸಿ ಸದ್ಬಳಕೆಗೆ ಯೋಜನೆ ರೂಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
ನವಲಗು0ದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ತುಪ್ಪರಿ ಹಳ್ಳದ ಪ್ರವಾಹ ತಡೆ ಕಾಮಗಾರಿಗೆ 315 ಕೋಟಿ ರೂಪಾಯಿ ಮಂಜೂರಾಗಿದೆ. ಮೊದಲ ಹಂತದ ಟೆಂಡರ್ ಆಗಿದೆ. ಹಳ್ಳದ ನೀರನ್ನು ನೀರಾವರಿ ಬಳಕೆ ಯೋಜನೆಯ ವಿಸ್ತÈತ ಯೋಜನಾ ವರದಿ ತಯಾರಿಸುವ ಪ್ರಕ್ರಿಯೆ ನಡೆದಿದೆ ಎಂದರು.
ಜಿಲ್ಲಾಽಕಾರಿ ದಿವ್ಯ ಪ್ರಭು, ಉಪ ವಿಭಾಗಾಽಕಾರಿ ಶಾಲಂ ಹುಸೇನ್, ನವಲಗುಂದ ಮತ್ತು ಅಣ್ಣಿಗೇರಿ ತಹಸೀಲ್ದಾರರು, ಲೋಕೋಪಯೋಗಿ, ನೀರಾವರಿ ಹಾಗೂ ಇತರ ಇಲಾಖೆಗಳ ಅಽಕಾರಿಗಳಿದ್ದರು.