ಶರಾವತಿ ನದಿಯಲ್ಲಿ ಪ್ರವಾಹ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ 368 ಜನ

Flood
Published on

 ಹೊನ್ನಾವರ: ತಾಲೂಕಿನಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿದೆ. ಘಟ್ಟದ ಮೇಲ್ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಿದ್ದು, ಅಲ್ಲಿಂದ ಹರಿದು ಬಂದ ನೀರು ಗೇರುಸೊಪ್ಪ ಜಲಾಶಯ ಸೇರಿದೆ. ಗೇರುಸೊಪ್ಪಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡಲಾಗಿದೆ. ಇದರಿಂದ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿ ನದಿ ತೀರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜನರು ಕಾಳಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಕಾಳಜಿಕೇಂದ್ರಗಳು:

ಗೇರುಸೊಪ್ಪ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಶರಾವತಿ ನದಿತೀರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಆತಂಕವುAಟಾಗಿದ್ದು ಜನರನ್ನು ಕಾಳಜಿಕೇಂದ್ರಗಳಿಗೆ ಸೇರಿಸಲಾಗಿದೆ. ತಾಲೂಕಿನಲ್ಲಿ ಶುಕ್ರವಾರ ಸಂಜೆ ವೇಳೆ ಒಟ್ಟೂ 15 ಕಾಳಜಿಕೇಂದ್ರಗಳನ್ನು ತೆರೆಯಲಾಗಿದ್ದು 368 ಜನರು ಆಶ್ರಯ ಪಡೆದಿದ್ದಾರೆ. ಶರಾವತಿ ನದಿ ತೀರದ ಸರಳಗಿ ಶಾಲೆಯಲ್ಲಿ 38, ಮಾವಿನಹೊಳೆಯಲ್ಲಿ 23, ಅಳ್ಳಂಕಿಯಲ್ಲಿ 51, ಮೇಲಿನ ಇಡಗುಂಜಿಯಲ್ಲಿ 5, ಪಡುಕುಳಿಯದಲ್ಲಿ 7, ಹೈಗುಂದದಲ್ಲಿ 83, ಮುರ್ನಕಳಿಯಲ್ಲಿ 9, ಗುಂಡಬಾಳ ನದಿತೀರದ ಬೇರೊಳ್ಳಿಯಲ್ಲಿ 21, ಹಡಿನಬಾಳದಲ್ಲಿ 35, ಗುಂಡಬಾಳದಲ್ಲಿ 12, ಹೆಬ್ಬೈಲ್‌ 10, ಗುಂಡಿಬೈಲ ನಂ.1 ರಲ್ಲಿ 5, ಗುಂಡಿಬೈಲ ನಂ.2 ರಲ್ಲಿ 13, ಭಾಸ್ಕೇರಿಯಲ್ಲಿ 46, ಗುಡ್ಡೇಬಾಳದಲ್ಲಿ 10 ಜನರು ಸೇರಿ ಒಟ್ಟೂ 368 ಜನರು ಕಾಳಜಿಕೇಮದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇವರಷ್ಟೇ ಅಲ್ಲದೇ 374 ಜನರು ಬೇರೆಡೆ ಸ್ಥಳಾಂತರಗೊಂಡು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಅಧಿಕಾರಿಗಳ ಭೇಟಿ:

ನೆರೆ ಪೀಡಿತ ಪ್ರದೇಶಗಳಿಗೆ ತಹಸೀಲದಾರ ಪ್ರವೀಣ ಕರಾಂಡೆ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಭೇಟಿ ನೀಡಿ ನೀರು ನುಗ್ಗಿದ ಸ್ಥಳಗಳನ್ನು ವೀಕ್ಷಿಸಿದರು. ಪ್ರವಾಹದ ಸಂದರ್ಭದಲ್ಲಿ ಸುರಕ್ಷಿತವಾಗಿರುವ ಕುರಿತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಪಂಚಾಯತಿ ನೋಡಲ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net