ಫ್ಲೆಕ್ಸ್ ಅಳವಡಿಕೆ ವೇಳೆ ವಿದ್ಯುತ್ ಆಘಾತ

flex new
Published on

ಪಡುಬಿದ್ರಿ: ಕಾರ್ಕಳ- ಪಡುಬಿದ್ರಿ ರಾಜ್ಯ ಹೆದ್ದಾರಿ ನಂದಿಕೂರು ಕೈಗಾರಿಕಾ ವಲಯದ ಮುಂಭಾಗದ ಜಾಹೀರಾತು ಬೋರ್ಡ್‌ಗೆ ಫ್ಲೆಕ್ಸ್ ಅಳವಡಿಸುವ ವೇಳೆ ಶನಿವಾರ ವಿದ್ಯುತ್ ಆಘಾತದಿಂದ ಜಾಹೀರಾತು ಏಜೆನ್ಸಿಯೊಂದರ ಕಾರ್ಮಿಕ ಅಸ್ಸಾಂ ಮೂಲದ ಆಲಂ ಹುಸೇನ್ (52) ಗಂಭೀರ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡು ಹುಲ್ಲು ಕರಟಿದೆ.

ನಂದಿಕೂರು ಸಬ್‌ಸ್ಟೇಷನ್‌ನಿಂದ ಪಾದೂರು ಸಂಪರ್ಕಿಸುವ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ಬೋರ್ಡ್ ಮೇಲಿಂದ ಹಾದುಹೋಗಿದ್ದು, ಅದರ ಶಾಕ್ ತಗುಲಿ ಕಾರ್ಮಿಕ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಹೀರಾತು ಹೋರ್ಡಿಗಳನ್ನೂ ತಂತಿಯಡಿಯಲ್ಲಿಯೇ ಹಾಕಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪಡುಬಿದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net