ಬ್ಯಾಟರಿ ಕದಿಯುತ್ತಿದ್ದ ನಾಲ್ವರ ಬಂಧನ

11 KOKATANUR 1-Web
ಬ್ಯಾಟರಿ ಕಳವು ಮಾಡುತ್ತಿದ್ದ ನಾಲ್ವರನ್ನು ಐಗಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್‌ಐಗಳಾದ ಶಿವರಾಜ ನಾಯಿಕವಾಡಿ, ಕುಮಾರ ಹಾಡಕಾರ, ಎಂ.ಡಿ. ಘೋರಿ ಇತತರಿದ್ದಾರೆ.
Published on

ಕೊಕಟನೂರ: ಅಥಣಿ ತಾಲೂಕಿನ ನಂದಗಾಂವ-ಘಟನಟ್ಟಿ ಗ್ರಾಮದ ಮಧ್ಯೆ ಇರುವ ಲಕ್ಷ್ಮೀದೇವಿ ದೇವಸ್ಥಾನ ಬಳಿಯ ಮೊಬೈಲ್ ಟವರ್‌ನ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಐಗಳಿ ಠಾಣೆಯ ಪಿಎಸ್‌ಐ ಶಿವರಾಜ ನಾಯಿಕವಾಡಿ ನೇತೃತ್ವದ ಪೊಲೀಸರ ತಂಡ ಮಂಗಳವಾರ ರಾತ್ರಿ ಬಂಧಿಸಿದೆ.

ನಂದಗಾಂವ ಗ್ರಾಮದ ಸುಕುಮಾರ ಭೀಮಪ್ಪ ಬಡಿಗೇರ, ಶಶಿಕಾಂತ ಸುರೇಶ ಜೀಬಾಗೋಳ, ಸವದಿ ಗ್ರಾಮದ ಶ್ರೀಶೈಲ ಮಲ್ಲಪ್ಪ ದೇಸಾಯಿ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಅನಿಲ ನಬೀಸಾಬ ಶಿಕ್ಕಲಗಾರ ಬಂಧಿತರು. ಐಗಳಿ ವ್ಯಾಪ್ತಿಯಲ್ಲಿ ಮೂರು, ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಹಾಗೂ ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಸೇರಿ ಒಟ್ಟು ಒಂಬತ್ತು ಮೊಬೈಲ್ ಟವರ್‌ಬ್ಯಾಟರಿ ಕಳ್ಳತನ ಮಾಡಿರುವುದಾಗಿ ಬಂಧಿತರು ಬಾಯಿಬಿಟ್ಟಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ನಗದು ಬಹುಮಾನ, ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಸಿಬ್ಬಂದಿ ಎ.ಎ. ಈರಕರ, ಪಿ.ಬಿ. ನಾಯಿಕ, ಎಂ.ಬಿ. ದೊಡಮನಿ, ಬಿ.ಬಿ. ಪಾಟೀಲ, ಎಸ್.ಎಂ.ಮೇತ್ರಿ, ಎಸ್.ಬಿ. ಪಾಟೀಲ, ಜೆ.ಐ. ಬಡಿಗೇರ, ಜಿ.ಪಿ. ರಾಠೋಡ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net