ಸ್ವಾತಂತ್ರ್ಯ ಎಂಬುವುದು ರಾಷ್ಟ್ರಭಕ್ತ ಹೋರಾಟಗಾರರ ತ್ಯಾಗದ ಫಲ, ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಎಸ್‌ಸಿಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಧ್ವಜಾರೋಹಣ ನೆರವೇರಿಸಿ ಪ್ರಾಂಶುಪಾಲ ಡಾ. ಡಿ. ಶ್ರೀಪತಿ ರಾವ್

scs
77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಎಸ್‌ಸಿಎಸ್ ಸಮೂಹ ಸಂಸ್ಥೆಗಳ ವತಿಯಿಂದ ಉರ್ವಾದ ಎಸ್‌ಸಿಎಸ್ ರಿವರ್‌ಸೈಡ್ ಕ್ಯಾಂಪಸ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್‌ಸಿಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಅಧ್ಯಕ್ಷ ಡಾ ರಜನೀಶ್ ಸೊರಕೆ, ಆಡಳಿತಾಧಿಕಾರಿ ಯು.ಕೆ ಖಾಲಿದ್ ಮೊದಲಾದವರು ಇದ್ದರು.
Published on

ಮಂಗಳೂರು: ಸ್ವಾತಂತ್ರ್ಯ ಎಂಬುವುದು ರಾಷ್ಟ್ರಭಕ್ತ ಹೋರಾಟಗಾರರ ತ್ಯಾಗದ ಫಲ, ಸ್ವಾತಂತ್ರ್ಯವು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಮೂಲ ಮಂತ್ರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಏಕತೆಯ ಮನೋಭಾವನೆಯಿಂದ ಪರಕೀಯರ ದಾಸ್ಯದ ವಿರುದ್ಧ ಹೋರಾಡಿದ ಪರಿಣಮವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆ ಮೂಲಕ ನಾವು ಸರ್ವಾಂಗೀಣ ಸಾಧನೆಯನ್ನು ಮಾಡುವಲ್ಲಿ ಯಶಸ್ಸನ್ನು ಕಂಡಿದ್ದೇವೆ ಎಂದು ಎಸ್‌ಸಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಡಿ. ಶ್ರೀಪತಿ ರಾವ್ ಹೇಳಿದರು.

77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಎಸ್‌ಸಿಎಸ್ ಸಮೂಹ ಸಂಸ್ಥೆಗಳ ವತಿಯಿಂದ ಉರ್ವಾದ ಎಸ್‌ಸಿಎಸ್ ರಿವರ್‌ಸೈಡ್ ಕ್ಯಾಂಪಸ್‌ನಲ್ಲಿ ನಡೆದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಭಾರತದ ಶ್ರೀಮಂತಿಕೆಯತ್ತ ಆಕರ್ಷಿತರಾಗಿ ಭಾರತಕ್ಕೆ ವ್ಯಾಪಾರ ನಿಮಿತ್ತ ಬಂದ ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿ ಅದನ್ನು ಒಂದು ಬಡ ರಾಷ್ಟ್ರ್ರಾಗಿ ನಮಗೆ ಬಿಟ್ಟು ಹೋದರು. ಆದರೆ ಭಾರತೀಯರ ದೇಶ ಪ್ರೇಮ ಮತ್ತು ಕಠಿಣ ಪರಿಶ್ರಮದಿಂದ ಇಂದು ಭಾರತ ವಿಶ್ವದಲ್ಲಿ ತಲೆಯೆತ್ತಿ ನಿಂತಿರುವ ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಇದನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮುಂದಿನ ಪೀಳಿಗೆ ಸಮರ್ಥವಾಗಿ ನಿರ್ವಹಿಸಬೇಕು ಎಂದರು.

ಎಸ್‌ಸಿಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಅಧ್ಯಕ್ಷ ಡಾ ರಜನೀಶ್ ಸೊರಕೆ, ಆಡಳಿತಾಧಿಕಾರಿ ಯು.ಕೆ ಖಾಲಿದ್, ಎಸ್‌ಸಿಎಸ್ ರಿವರ್ ಸೈಡ್ ಇಂಟರ್ ನ್ಯಾಶನಲ್ ಅಕಾಡೆಮಿಯ ಪ್ರಾಂಶುಪಾಲೆ ಹೆಲೆನ್ ಲೋಬೋ, ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್, ಎಸ್‌ಸಿಎಸ್ ಗ್ರೂಪ್ ನ ವಿವಿಧ ಪ್ರಾಂಶುಪಾಲರುಗಳು ಮತ್ತು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪದವಿಪೂರ್ವ ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ದೃಷ್ಟಿ ಕನಸಾಗರ ಮತ್ತು ಮೋನಿಕಾ ದತ್ತ ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ಕಿಣಿ ಸ್ವಾಗತಿಸಿದರು, ಶುಷ್ಮಾ ರಮಾನಾಥ್ ವಂದಿಸಿದರು.

----------------------

ಸ್ವಾತಂತ್ರ್ಯ ಎಂಬುವುದು ರಾಷ್ಟ್ರಭಕ್ತ ಹೋರಾಟಗಾರರ ತ್ಯಾಗದ ಫಲ, ಹಲವಾರು ರಾಷ್ಟ್ರ ನಾಯಕರ ತ್ಯಾಗದ ಫಲವಾಗಿ ಇವತ್ತು ನಾವು ಸಂಭ್ರಮಿಸುವಂತಾಗಿದೆ. ದೇಶಕ್ಕಾಗಿ ಅನೇಕ ಜನ ಹೋರಾಡಿದ್ದಾರೆ. ಜೀವವನ್ನು ಪಣಕ್ಕಿಟ್ಟಿದ್ದಾರೆ. ನಮ್ಮ ದೇಶವು 77ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ಅಗತ್ಯ.

ಡಾ ರಜನೀಶ್ ಸೊರಕೆ, ಎಸ್‌ಸಿಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net