ಕಾಂಗ್ರೆಸ್ಸಿಗರಿಂದ ಪಂಜಿನ ಮೆರವಣಿಗೆ

3 smg 8
ಶಿವಮೊಗ್ಗದಲ್ಲಿ ಪಂಜಿನ ಮೆರವಣಿಗೆ ಮಾಡಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು.
Published on

ಶಿವಮೊಗ್ಗ: ಆರಗ ಜ್ಞಾನೇಂದ್ರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಕಾರ್ಯಕರ್ತರು ಗುರುವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಜ್ಞಾನೇಂದ್ರ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಗೋಪಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ವಿಭಾಗದ ಅಧ್ಯಕ್ಷ ಆರ್.ಶಿವಣ್ಣ, ಗಾಜನೂರು ನಾಗರಾಜ್, ಮಲ್ಲಪ್ಪ, ಗೀತಾ ಬಾಯಿ, ಬಿದಿರೆ ಲಕ್ಷ್ಮಣಪ್ಪ, ಅಣ್ಣಪ್ಪ, ಎನ್.ವಸಂತ್‌ಕುಮಾರ್, ಚಂದ್ರಶೇಖರ್, ನಿಖಿಲ್, ಎಂ.ಎಸ್.ಸಿದ್ದಪ್ಪ, ಎ.ಕೆ.ನಿಂಗಪ್ಪ, ರಾಜೇಂದ್ರಕುಮಾರ್, ಶಿವಕುಮಾರ್, ಜಗದೀಶ್, ಯುವರಾಜ್, ಕಡೇಕಲ್ ರಾಜು, ಗಿರೀಶ್, ಜಯಪ್ಪ, ಶಿವಲಿಂಗಪ್ಪ, ತಿಮ್ಮರಾಜು, ಸಂತೋಷ್ ಬನ್ನಿಕೆರೆ, ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net