ಗಣೇಶೋತ್ಸವಕ್ಕೆ ಧ್ವಜ ಕಂಬ ಸ್ಥಾಪನೆ

Installation of Bhagwa flag pole
Published on

ಬಂಕಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ನೆಹರು ಗಾರ್ಡನ್‌ನಲ್ಲಿ ಹಿಂದು ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಭಾನುವಾರ ಗಣೇಶ ಉತ್ಸವ ಮಂಡಳಿಯಿಂದ ಭಗವಾ ಧ್ವಜ ಕಂಬ ಸ್ಥಾಪಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಧ್ವಜ ಕಂಬಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಆರ್‌ಎಸ್‌ಎಸ್ ಮುಖಂಡ ಗಂಗಾಧರ ಮಾಮ್ಲೆಪಟ್ಟಣಶೆಟ್ಟರ್, ನಾಡಿಗೆ ಪ್ರಖ್ಯಾತಿ ಪಡೆದ ಬಂಕಾಪುರ ಹಿಂದು ಮಹಾಗಣಪತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆವರೆಗೆ ನಮ್ಮ ಸಂಸ್ಕೃತಿ ಬಿಂಬಿಸುವ ವಿಶೇಷತೆ ಹೊಂದಿದೆ. ಇಂತಹ ಮಹಾಗಣಪತಿ ಪ್ರತಿಷ್ಠಾಪನೆಗೆ ಸಂಕಷ್ಟ ಚತುರ್ಥಿಯ ದಿನ ಧ್ವಜ ಕಂಬ ಸ್ಥಾಪನೆ ಮಾಡಿದ್ದೇವೆ ಎಂದರು.

ಗಣೇಶ ಉತ್ಸವ ಮಂಡಳಿ ಅಧ್ಯಕ್ಷ ಈರಣ್ಣ ಬಳಿಗಾರ ಮಾತನಾಡಿ, ಸೆ. 19ರಂದು ಗೌರಿ ಗಣೇಶ ಹಬ್ಬವಿದೆ. ಹಿಂದು ಸಂಪ್ರದಾಯದಂತೆ ಭಗವಾ ಧ್ವಜ ಕಂಬ ಸ್ಥಾಪಿಸಿದ್ದೇವೆ ಎಂದರು.

ಹಿಂದು ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ, ಶಿವಾನಂದ ದೇವಸೂರ, ಗುಡ್ಡಪ್ಪ ಮತ್ತೂರ, ಉಮೇಶ ಅಂಗಡಿ, ಹಣಮಂತ ಹೊಸಮನಿ, ಚಂದ್ರುಗೌಡ ಕೆರಿಗೌಡ್ರ, ಆಂಜನೇಯ ಹೊಸಮನಿ, ಬಸಣ್ಣ ಯಲಿಗಾರ, ಬಾಬುರಾವ್ ಹಂಡೆ, ಸುಮನ ಅಂಗಡಿ, ಮಂಜು ಕತ್ತಿ, ಸೋಮಶೇಖರ ಗೌರಿಮಠ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net