ಆರ್​ಎಸ್​ಎಸ್​ ಕಚೇರಿ ಕೇಶವ ಕುಂಜದಲ್ಲಿ "ಹರ್​ ಘರ್​ ತಿರಂಗಾ' ಅಭಿಯಾನ

Keshava kunja
Published on

ಹುಬ್ಬಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಬರಬೇಕಾದರೆ ಅಸಂಖ್ಯ ಹೋರಾಟಗಾಗರರ ಬಲಿದಾನವಾಗಿದೆ. ತಾಯಿ ಭಾರತಾಂಬೆಯ ಮುಕ್ತಿಗೆ ಲಾಂತರ ದೇಶಭಕ್ತರು ಪ್ರಾಣ ತೆತ್ತಿದ್ದಾರೆ. ಅವರ ತ್ಯಾಗ, ಬಲಿದಾನಗಳಿಗೆ ಗೌರವ ಸೂಚಿಸಬೇಕು. ಅವರ ಸ್ಮರಣ ನಿರಂತರವಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂ(ಆರ್​ಎಸ್​ಎಸ್​)ನ ಹಿರಿಯ ಪ್ರಚಾರಕ ಸು.ರಾಮಣ್ಣ ಹೇಳಿದರು.
"ಹರ್​ ಘರ್​ ತಿರಂಗಾ' ಅಭಿಯಾನದ ಅಂಗವಾಗಿ ನಗರದ ಆರ್​ಎಸ್​ಎಸ್​ ಉತ್ತರ ಪ್ರಾಂತ ಕಚೇರಿ ಕೇಶವ ಕುಂಜದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತೀಯ ಜೀವನಶೈಲಿ ನಮ್ಮಲ್ಲಿ ಅಡಕವಾದಾಗ ಮಾತ್ರ ನಮ್ಮ ಹಿರಿಯರು ಹೇಳಿಕೊಟ್ಟ ಮೌಲ್ಯಗಳು ಉಳಿಯುತ್ತವೆ. ಭಾರತದ ರಕ್ಷಣೆಯಾಗುತ್ತದೆ. ಹಾಗಾಗಿ, ಆಂಗ್ಲ ಭಾಷೆಯ ವ್ಯಾಮೋಹ ಕಡಿಮೆಯಾಗಬೇಕು. ನಮ್ಮ ಮಾತೃತ ಭಾಷೆ ಉಳಿಸಬೇಕು ಎಂದು ಹೇಳಿದರು.
ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ಕ್ರಾಂತಿಕಿರಣ ಮಾತನಾಡಿ, ಸ್ವಾತಂತ್ರ್ಯ ಪಡೆಯುವಲ್ಲಿ ನಮ್ಮ ಹಿರಿಯರ ಹೋರಾಟ ಹಾಗೂ ಅದರ ಇತಿಹಾಸ ಅನನ್ಯವಾಗಿದೆ. ಆದರೆ, ಪಠ್ಯಪುಸ್ತಕಗಳಲ್ಲಿ ಇದರ ಕುರಿತು ತಿರುಚಿ ಬರೆಯಲಾಗಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ಸರಿಯಾಗಿ ಬೋಧನೆಯಾಗಬೇಕು. ಸುಮಾರು 20 ಲಕ್ಷ ಜನ ಸ್ವರಾಜ್ಯಕ್ಕಾಗಿ ಹೋರಾಡಿದ್ದಾರೆ. ಇನ್ನೂ ಅಸಂಖ್ಯ, ಅಜ್ಞಾತ ಹೋರಾಟಗಾರರ ಪರಿಚಯ ಈಗಿನ ಯುವಪೀಳಿಗೆಗೆ ಆಗಬೇಕು ಎಂದು ಹೇಳಿದರು.
ಆರ್​ಎಸ್​ಎಸ್​ ಪ್ರಾಂತ ಸಹ ಕಾರ್ಯವಾಹ ಕಿರಣ ಗುಡ್ಡದಕೇರಿ, ಪ್ರಾಂತ ಸಹ ಪ್ರಚಾರಕ ಶ್ರೀನಿವಾಸ ನಾಯಕ, ಅಭಿಷೇಕ ಕುಬಸದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net