ಚೌತಿ ಗ್ರಾಮದಲ್ಲಿ ಧ್ವಜಾರೋಹಣ

16.Pyp. 01
ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಶಾಲೆಗೆ ಕಂಪ್ಯೂಟರ್ ನೀಡಲಾಯಿತು. ಸಂಸ್ಥಾಪಕ ಅಧ್ಯಕ್ಷ ನಂಜುಂಡ ನಂಜೇಗೌಡ, ಮುತ್ತುರಾಜ್, ಮೋಹನ್ ಕುಮಾರ್, ಗೌರಮ್ಮ, ದೇವರಾಜ್, ಆನಂದ್, ಲಕ್ಕಣ್ಣ, ಮೋಹನ್, ದೀಪಾ, ವೆಂಕಟೇಶ್, ನಾಗೇಶ್ ಇತರರು ಇದ್ದರು.
Published on

ಪಿರಿಯಾಪಟ್ಟಣ: ಅಹಿಂಸಾ ತತ್ವಗಳಿಂದ ಸ್ವಾತಂತ್ರ್ಯ ಪಡೆಯಬಹುದು ಎಂದು ಮಹಾತ್ಮ ಗಾಂಧೀಜಿ ಅವರು ದೇಶಾದ್ಯಂತ ಉಪವಾಸ ಸತ್ಯಾಗ್ರಹ ಚಳವಳಿ ಪ್ರಾರಂಭಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜುಂಡ ನಂಜೇಗೌಡ ತಿಳಿಸಿದರು.

ತಾಲೂಕಿನ ಚೌತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದಲ್ಲಿ ನಡೆಯುತ್ತಿರುವ ಸ್ವೇಚ್ಛಾಚಾರ ಹಾಗೂ ಸಾಮಾಜಿಕ ಮೌಢ್ಯ ಹೋಗಲಾಡಿಸಲು ಯುವಶಕ್ತಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಯುವಜನತೆ ಎಚ್ಚೆತ್ತು ತಮ್ಮ ಜೀವನದಲ್ಲಿ ದೇಶ ಪ್ರೇಮ, ಶಿಸ್ತು, ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಶಾಲೆಗೆ ಕಂಪ್ಯೂಟರ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮುತ್ತುರಾಜ್, ಪಿಡಿಒ ಮೋಹನ್ ಕುಮಾರ್, ಗ್ರಾಪಂ ಅಧ್ಯಕ್ಷ ಗೌರಮ್ಮ, ಶಿಕ್ಷಕರಾದ ಆನಂದ್, ಲಕ್ಕಣ್ಣ, ಮೋಹನ್, ದೀಪ, ವೆಂಕಟೇಶ್ ಮುಖಂಡರಾದ ದೇವರಾಜ್, ನಾಗೇಶ್, ಅಣ್ಣಪ್ಪ, ವೈರಮುಡಿಗೌಡ, ಮಹೇಶ್, ಸ್ವಾಮಿ, ತಮ್ಮಯ್ಯ, ಮಲ್ಲೇಶ್, ದರ್ಶನ್, ಲಕ್ಷ್ಮಣ್, ಮಾದನಾಯ್ಕ, ರವಿಚಂದ್ರ, ಸ್ವಾಮಿ, ಶ್ರುತಿ, ಪ್ರಕಾಶ್, ರವಿಕುಮಾರ್, ಬಸಪ್ಪ, ಗುರುಮೂರ್ತಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net