

ಕುಂಬಳೆ: ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಜ.14ರಿಂದ 18ರವರೆಗೆ ನಡೆಯಲಿದ್ದು, ಮಂಗಳವಾರ ಧ್ವಜಾರೋಹಣಗೊಂಡಿತು. ದೇಲಂಪಾಡಿ ಗಣೇಶ ತಂತ್ರಿ ಅವರ ಕಾರ್ಮಿಕತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡವು.
ಮಂಗಳವಾರ ಸೋಪಾನ ಸಂಗೀತ (ಅಷ್ಟಪದಿ) ಕೆ.ವಿ.ರಾಜನ್ ಮಾರಾರ್, ಪಯ್ಯನ್ನೂರು ತಂಡದವರಿಂದ ನಡೆಯಿತು. ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ದೇವಾಲಯಕ್ಕೆ ಆಗಮಿಸಿತು. ಶ್ರೀ ಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಮಧ್ಯಾಹ್ನ ಅನ್ನದಾನ ನಡೆಯಿತು. ಸಂಜೆ ನಡೆ ತೆರೆದು ಕರ್ನಾಟಕ ಸಂಗೀತ ಕಛೇರಿ ಪ್ರಸ್ತುತಿಗೊಂಡಿತು.ದೀಪಾರಾಧನೆ, ರಂಗಪೂಜೆ, ಉತ್ಸವ, ಶ್ರೀ ಭೂತಬಲಿ ನಡೆಯಿತು.
ಬುಧವಾರ ಬೆಳಗ್ಗೆ 6ರಿಂದ ಉತ್ಸವ, ಶ್ರೀ ಬಲಿ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಅನ್ನದಾನ, ಸಂಜೆ ನಡೆ ತೆರೆಯುವುದು, ಭಕ್ತಿ ರಸಮಂಜರಿ, ದೀಪಾರಾಧನೆ, ಪೂಜೆ, ಸಣ್ಣದೀಪೋತ್ಸವ, ಶ್ರೀ ಭೂತಬಲಿ ನಡೆಯಲಿದೆ.
ಗುರುವಾರ ಉತ್ಸವ ಶ್ರೀ ಬಲಿ, ತುಲಾಭಾರ ಸೇವೆ, ಮಹಾಪೂಜೆ, ಶ್ರೀ ಬಲಿ, ಅನ್ನದಾನ, ನಡೆ ತೆರೆಯುವುದು, ವಿಶ್ವರೂಪ ದರ್ಶನ, ಹಿಂದುಸ್ತಾನಿ ಸಂತವಾಣಿ ಹಾಗೂ ದಾಸವಾಣಿ, ಪೂಜೆ, ನಡುದೀಪೋತ್ಸವ, ಶ್ರೀ ಬಲಿ ನಡೆಯಲಿದೆ.