ಉತ್ತಮ ಸಮಾಜ ನಿರ್ಮಾಣಕ್ಕೆ ಸಹಬಾಳ್ವೆ ಮುಖ್ಯ

26 HRS 01
????????????
Published on

ಚನ್ನರಾಯಪಟ್ಟಣ: ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಹೆಮ್ಮೆಯ ದೇಶ ನಮ್ಮದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 72 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ನಾಡು ಉತ್ತಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಕಲೆ ಹಾಗೂ ಸಾಹಿತ್ಯ ಹೊಂದಿದ್ದು ಸಹಬಾಳ್ವೆಯ ತಳಹದಿಯ ಮೇಲೆ ನಿಂತಿದೆ ಎಂದರು.
ಭಾರತೀಯರಾದ ನಾವು ಸರ್ವಧರ್ಮಗಳನ್ನು ಒಪ್ಪಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇವೆ. ದೇಶ ಹಾಗೂ ಭಾಷೆಯನ್ನು ಗೌರವಿಸುತ್ತೇವೆ. ಸೇಡಿನ ರಾಜಕಾರಣಕ್ಕಿಂತ ಸಹಬಾಳ್ವೆಯ ಸಮಾಜ ಕಟ್ಟುವುದು ಮುಖ್ಯ ಎಂದು ತಿಳಿಸಿದರು.
ತಾಲೂಕಿನ ರೈತರಿಗೆ ನೆಮ್ಮದಿ ಕಲ್ಪಿಸುವ ಸಲುವಾಗಿ ನೀರಾವರಿ, ಶಿಕ್ಷಣ, ಆರೋಗ್ಯ, ಹೈನುಗಾರಿಕೆ ಹಾಗೂ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕೃಷಿ, ಸಾಹಿತ್ಯ, ಆರೋಗ್ಯ, ಶಿಕ್ಷಣ, ಆರಕ್ಷಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಅಭಿನಂದಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸರಳವಾಗಿ ನಡೆಸಿಕೊಟ್ಟರು.
ತಹಸೀಲ್ದಾರ್ ಜೆ.ಬಿ.ಮಾರುತಿ, ಇಒ ಸುನೀಲ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಕುಮಾರ್, ಜಿಪಂ ಸದಸ್ಯರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಮಮತಾ ರಮೇಶ್, ಮಂಜುಳಾ ಎಂ.ಶಂಕರ್, ಶ್ವೇತಾ ಆನಂದ್, ಪುರಸಭೆ ಅಧ್ಯಕ್ಷ ಎಚ್.ಎನ್.ನವೀನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ಎಪಿಎಂಸಿ ಅಧ್ಯಕ್ಷ ಶಿವಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರಕಾಶ್ ಜೈನ್, ಸಿಪಿಐ ಸುಬ್ರಹ್ಮಣ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net