

ರಾಯಚೂರು: ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ದಾಖಲೆ ಸಲ್ಲಿಕೆಗೆ ಗೆಜೆಟೆಡ್ ಅಕಾರಿಗಳ ಸಹಿ ಮಾಡಿಕೊಳ್ಳಲು ಎದುರಾಗುತ್ತಿರುವ ಸಮಸ್ಯೆ ನಿವಾರಿಸುವಂತೆ ಕರ್ನಾಟಕ ರಣೀರ ಪಡೆ ಒತ್ತಾಯಿಸಿದೆ.
ಸಂಘಟನೆ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮಂಗಳವಾರ ಮನವಿ ಸಲ್ಲಿಸಿ, ವಿದ್ಯಾರ್ಥಿಗಳು ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳಲು ಅಕಾರಿಗಳ ಕಚೇರಿಗೆ ಸಹಿ ಮಾಡದೇ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಅಂಕಪಟ್ಟಿ ಮುಂತಾದ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳಲು ಮೂಲ ದಾಖಲೆಗಳೊಂದಿಗೆ ಹೋದರೂ ಗೆಜೆಟೆಡ್ ಅಕಾರಿಗಳು, ಕಾಲೇಜುಗಳ ಮುಖ್ಯಸ್ಥರು ಬೆಳಗ್ಗೆ ಬನ್ನಿ, ಸಂಜೆ ಬನ್ನಿ ಎಂದು ಅಲೆದಾಡುತ್ತಿದ್ದಾರೆ. ಕೆಲವರು ಸಹಿ ಮಾಡಲು ನಿರಾಕರಿಸುತ್ತಿದ್ದಾರೆ.
ಹಲವಾರು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಸಹಿಗಾಗಿ ಬರುತ್ತಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿಯಲ್ಲಿ ಕಾದು ಕುಳಿತುಕೊಳ್ಳುವಂತಾಗಿದೆ. ಕೂಡಲೇ ಗೆಜೆಟೆಡ್ ಅಕಾರಿಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆ ನೀಡದೆ ಸಹಿ ಮಾಡಿ ಕಳಿಹಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘಟನೆ ನಗರ ಘಟಕ ಅಧ್ಯಕ್ಷ ಪ್ರದೀಪಕುಮಾರ, ಪದಾಕಾರಿಗಳಾದ ವಿನಯಕುಮಾರ, ಅಶೋಕ, ಭಾಸ್ಕರ ಮಾಚರ್ಲಾ ಇದ್ದರು.