ಕುಡಿಯುವ ನೀರಿನ ಘಟಕ ಸರಿಪಡಿಸಿ

4
Published on

ಆರು ತಿಂಗಳಾದರೂ ಸಂಬಂಧಪಟ್ಟವರಿಂದ ಕ್ರಮವಿಲ್ಲ | ಗ್ರಾಮಸ್ಥರ ಪರದಾಟ

ವಿಜಯವಾಣಿ ಸುದ್ದಿಜಾಲ ಶಿರಾ
ತಾಲೂಕಿನ ತಾವರೆಕೆರೆ ಗ್ರಾಮದ ಊರು ಬಾಗಿಲು ಶ್ರೀ ಆಂಜನೇಯ ದೇವಸ್ಥಾನ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಆರು ತಿಂಗಳಾದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ತಾವರೆಕೆರೆ ಗ್ರಾಮದಲ್ಲಿ ಪ್ರಸ್ತುತ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಗ್ರಾಮಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ಅದರಲ್ಲೂ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿದೆ. ಅಗತ್ಯವಾಗಿರುವ ನೀರಿನ ಟಕ ಕೆಟ್ಟು ನಿಂತಿದ್ದು, ಸಂಬಂಧಪಟ್ಟವರು ರ್ನಿಲಕ್ಷ್ಯ ತೋರುತ್ತಿದ್ದಾರೆ. ಆದಷ್ಟು ಬೇಗ ಈ ಟಕವನ್ನು ದುರಸ್ಥಿಪಡಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾವರೆಕೆರೆ ಗ್ರಾಮದ 2 ನೀರಿನ ಘಟಕಗಳು ಕೆಟ್ಟು ನಿಂತು ಗ್ರಾಮಸ್ಥರು ಮೊಸರುಕುಂಟೆ ಹಾಗೂ ಮಾರನಗೆರೆ ಗ್ರಾಮಗಳಿಗೆ ಹೋಗಿ ನೀರು ತರುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಧಿಕಾರಿ, ಜಪ್ರತಿನಿಧಿಗಳಿಗೆ ಸಮಸ್ಯೆ ಬಗ್ಗೆ ತಿಳಿಸಿದರು ಪ್ರಯೋಜನವಾಗಿಲ್ಲ. ಆದಷ್ಟು ಬೇಗ ದುರಸ್ತಿ ಪಡಿಸಿ ಸಮಸ್ಯೆ ನಿವಾರಿಸಬೇಕು.| ಹೇಮಂತ್​ ಕುಮಾರ್​ ಸ್ಥಳೀಯ ನೀರಿನ ಘಟಕದ ನಿರ್ವಹಣೆಯನ್ನು ಆರ್​ಡಬ್ಲ್ಯುಎಸ್​ ನಿರ್ವಹಿಸುತ್ತಿದ್ದು, ನಾನು ಪತ್ರದ ಮೂಲಕ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದೆ. ಶೀಘ್ರದಲ್ಲಿಯೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಟಕ ನಿರ್ವಾಹಕರು ತಿಳಿಸಿದ್ದಾರೆ.| ನಾಗರಾಜು, ತಾವರೆಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net