ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ  5 ವರ್ಷ ಸೆರೆವಾಸ ಜತೆಗೆ 2.32 ಕೋಟಿ ರೂ., ದಂಡ

subbu11
Published on

ತುಮಕೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಸಾಬೀತಾದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರಿಗೆ 5 ವರ್ಷ ಕಠಿಣ ಕಾರಾಗೃಹ ಶಿೆ ಹಾಗೂ 2.32 ಕೋ.ರೂ., ಭಾರೀ ಮೊತ್ತದ ದಂಡ ವಿಧಿಸಿ ತುಮಕೂರಿನ ಲೋಕಾಯುಕ್ತ ನ್ಯಾಯಾಲಯವು ಮಂಗಳವಾರ ಐತಿಹಾಸಿಕ ತೀರ್ಪು ನೀಡಿದೆ.

ತುಮಕೂರು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾಗಿದ್ದ ಆರ್​.ಸುಬ್ರಹ್ಮಣ್ಯ ವಿರುದ್ಧದ ಆದಾಯಕ್ಕಿಂತ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ವಿಚಾರಣೆ ಪೂರ್ಣಗೊಳಿಸಿದ ತುಮಕೂರಿನ 7ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ (ಲೋಕಾಯುಕ್ತ ನ್ಯಾಯಾಲಯ)ದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು ಅಕ್ರಮ ಆಸ್ತಿಗಳಿಕೆ ಆರೋಪ ಸಾಬೀತಾದ ಹಿನ್ನೆಲೆ ಮಹತ್ವದ ಆದೇಶ ಹೊರಡಿಸಿದ್ದಾರೆ.

2.32 ಕೋ.ರೂ., ದಂಡ ಕಟ್ಟಲು ವಿಲವಾದರೆ ಎರಡು ವರ್ಷ ಹೆಚ್ಚುವರಿ ಸಾದಾ ಕಾರಾಗೃಹ ಶಿೆಯನ್ನು ವಿಧಿಸಿ ತೀರ್ಪು ನೀಡಿರುವುದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧದ ಗರಿಷ್ಠ ಶಿೆ ಎನಿಸಿದೆ. 2018ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯದಲ್ಲಿದ್ದಾಗಲು ಸಹ ಸುಬ್ರಹ್ಮಣ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ನಿವೃತ್ತಿ ಅಂಚಿನಲ್ಲಿರುವ ಸುಬ್ರಹ್ಮಣ್ಯಗೆ ಯಾವುದೇ ಸ್ಥಾನ ತೋರಿಸದೆ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿತ್ತು.


ಎಸಿಬಿ ಬಲೆಗೆ ಬಿದ್ದಿದ್ದ ಸುಬ್ರಹ್ಮಣ್ಯ: 2016ರಲ್ಲಿ ತುಮಕೂರಿನಲ್ಲಿ ಸಮಾಜ ಕಲ್ಯಾಣಇಲಾಖೆ ಜಂಟಿ ನಿರ್ದೇಶಕರಾಗಿದ್ದ ಸುಬ್ರಹ್ಮಣ್ಯ ವಿರುದ್ಧ ಆದಾಯಕ್ಕಿಂತ ಅಕ್ರಮ ಆಸ್ತಿಗಳಿಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆಹಾಕಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸ್​ ಉಪಅಧೀಕ್ಷಕ ಟಿ.ಕೋದಂಡರಾಮ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಅಂದಿನ ಎಸಿಬಿ ಇನ್ಸೆಪೆಕ್ಟರ್​ ಎಂ.ವಿ.ಗುರುಪ್ರಸಾದ್​ ಕಲಂ-13 (1)(ಇ), 13 (2), ಪಿಸಿ ಆಕ್ಟ್​ -1988 (ತಿದ್ದುಪಡಿಕಾಯ್ದೆ -2018) ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುಬ್ರಹ್ಮಣ್ಯ ಮನೆ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದರು.
ನಂತರ ಈ ಪ್ರಕರಣದ ತನಿಖೆ ಮುಂದುವರೆಸಿದ್ದ ಇನ್ಸೆಪೆಕ್ಟರ್​ ಹಾಲಪ್ಪ, ತನ್ನ ಹಾಗೂ ಕುಟುಂಬದ ಹೆಸರಲ್ಲಿ 1,16,44,000 ರೂ., ಮೊತ್ತದ ಅಕ್ರಮ ಆಸ್ತಿ ಹೊಂದಿರುವುದಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ಎನ್​.ಬಿ.ಬಸವರಾಜು ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net