ಹರಕೆ ತೀರಿಸಲು ದೇವಸ್ಥಾನಕ್ಕೆ ಹೋಗುತ್ತಿದ್ದ ಐವರು ಮಹಿಳೆಯರ ದುರ್ಮರಣ!

Tractor
Published on

ಕನಕಪುರ: ಕಾವೇರಿ ನದಿತೀರದ ಅರಣ್ಯ ಪ್ರದೇಶದ ತಿರುವಿನಲ್ಲಿ ಸೋಮವಾರ ಟ್ರಾ್ಯಕ್ಟರ್ ಪಲ್ಟಿಯಾದ ಪರಿಣಾಮ ಐವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ.

ಕೆರಾಳಾಳುಸಂದ್ರದ ನಿವಾಸಿಗಳಾದ ಈರಮ್ಮ (85), ಹೊಸಬಮ್ಮ (75), ಪುಟ್ಟನಿಂಗಮ್ಮ (60), ಗೌರಮ್ಮ (60), ಮಂಗಳಾ (25) ಮೃತರು. ಕೆರಳಾಳುಸಂದ್ರದಲ್ಲಿ 25ಕ್ಕೂ ಹೆಚ್ಚು ಮಂದಿ ತಮಿಳುನಾಡಿನ ಓಂಶಕ್ತಿ ದೇವಿಗೆ ದೇವಾಲಯಕ್ಕೆ ತೆರಳಲು ಹರಕೆ ಹೊತ್ತಿದ್ದ ಹಿನ್ನೆಲೆಯಲ್ಲಿ ಪ್ರಥಮ ಪೂಜೆಗಾಗಿ ದಬ್ಬಗುಳಿ ಕ್ಷೇತ್ರದ ಬಸವೇಶ್ವರನಿಗೆ ಪೂಜೆ ಸಲ್ಲಿಸಲು ಕೆರಳಾಳುಸಂದ್ರದಿಂದ ತಮಿಳá-ನಾಡು ಗಡಿಯಲ್ಲಿರುವ ದಬ್ಬಗುಳಿ ಬಸವೇಶ್ವರ ದೇವಾಲಯಕ್ಕೆ ತೆರಳá-ತ್ತಿದ್ದಾಗ ಅಪಘಾತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net