ಶಿಕ್ಷಕರ ದಿನಾಚರಣೆಯಲ್ಲಿ ಪಂಚ ಶಿಕ್ಷಕರಿಗೆ ಸನ್ಮಾನ

sanmana (2)
ಮಣ್ಣಗುಡ್ಡೆ ಮಂಗಳಾ ಆಂಗ್ಲಮಾಧ್ಯಮ ಶಾಲೆಯಲ್ಲಿ ತೆಂಕ ಎಕ್ಕೂರು ಸರ್ಕಾರಿ ಶಾಲೆಯ ಸುಮತಿ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೋಭಾ ದೇವಾಡಿಗ, ಪಿಲಿಕುಳ ಸರ್ಕಾರಿ ಶಾಲೆಯ ಸುಕನ್ಯಾ ದೇವಾಡಿಗ, ಸುರತ್ಕಲ್ ಲಯನ್ಸ್ ವಿಶೇಷ ಚೇತನ ಶಾಲೆಯ ಗೀತಾ, ಎನ್‌ಎಂಪಿಟಿ ಪ್ರೌಢಶಾಲೆ ಯು ನಿವೃತ್ತ ಶಿಕ್ಷಕ ಚಿದಾನಂದ ದೇವಾಡಿಗ ಮತ್ತಿತರರು ಹಾಜರಿದ್ದರು.
Published on

ಮಂಗಳೂರು: ಮಣ್ಣಗುಡ್ಡೆ ಮಂಗಳಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಐವರು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಮಂಗಳೂರು ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಶೋಭಾ ದೇವಾಡಿಗ ಮುಖ್ಯ ಅತಿಥಿಯಾಗಿದ್ದರು. ಪಿಲಿಕುಳ ಸರ್ಕಾರಿ ಶಾಲೆಯ ಸುಕನ್ಯಾ ದೇವಾಡಿಗ, ಸುರತ್ಕಲ್ ಲಯನ್ಸ್ ವಿಶೇಷ ಚೇತನ ಶಾಲೆಯ ಗೀತಾ, ಎನ್‌ಎಂಪಿಟಿ ಪ್ರೌಢಶಾಲೆ ನಿವೃತ್ತ ಶಿಕ್ಷಕ ಚಿದಾನಂದ ದೇವಾಡಿಗ, ತೆಂಕ ಎಕ್ಕೂರು ಸರ್ಕಾರಿ ಶಾಲೆಯ ಸುಮತಿ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಸಂಚಾಲಕ ಸುಭಾಷ್ಚಂದ್ರ ಕಣ್ವತೀರ್ಥ ಕರ್ನಾಟಕ ರಾಜ್ಯ ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಶ್ರೀಧರ ಮೊಯ್ಲಿ, ಕಾರ್ಯದರ್ಶಿ ಸುಧಾಕರ ಮೊಯ್ಲಿ, ಜಯ ಮೊಯ್ಲಿ, ಮುಖ್ಯಶಿಕ್ಷಕಿ ಜಯಲಕ್ಷ್ಮೀ, ಅಶೋಕ ಮೊಯ್ಲಿ, ಲೋಕಾನಂದ, ಭಾಸ್ಕರ್ ಇಡ್ಯಾ, ಪ್ರಕಾಶ್ ಪೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net