5 ರಾಜ್ಯಗಳು ಕರೊನಾ ಹಾಟ್​ಸ್ಪಾಟ್: ಟಾಪ್-2ನಲ್ಲಿ ಕರ್ನಾಟಕ

corona virus
Published on

ಬೆಂಗಳೂರು: ದೇಶದಲ್ಲಿ ಕರೊನಾ ಸೋಂಕು 12 ಲಕ್ಷ ಗಡಿ ದಾಟುತ್ತಿರುವ ಆತಂಕದ ಮಧ್ಯೆ ಅದರಲ್ಲಿ ಶೇ.30 ಸೋಂಕು ದಕ್ಷಿಣ ಭಾರತದ ಐದು ರಾಜ್ಯಗಳಲ್ಲೇ ಕಂಡುಬಂದಿರುವುದು ಮತ್ತಷ್ಟು ಚಿಂತೆಗೀಡುಮಾಡಿದೆ. ಈ ಪೈಕಿ ಕರ್ನಾಟಕ ಸೇರಿ ಮೂರು ರಾಜ್ಯಗಳು ದೇಶದ ಮೊದಲ ಐದು ರಾಜ್ಯಗಳಲ್ಲಿವೆ.

ಅತಿ ಹೆಚ್ಚು ಸೋಂಕಿರುವ ತಮಿಳುನಾಡು (1,80,643) ಮೊದಲಿದ್ದರೆ, ನಂತರದಲ್ಲಿ ಕರ್ನಾಟಕ (75,833), ಆಂಧ್ರಪ್ರದೇಶ (58,668), ತೆಲಂಗಾಣ (47,705) ಹಾಗೂ ಕೇರಳ (13,994) ರಾಜ್ಯಗಳಿವೆ. ಈ ಐದು ರಾಜ್ಯಗಳ ಪ್ರಕರಣವೇ 3,76,843 ಇದೆ. ದೇಶದ ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಟಾಪ್ ಸ್ಥಾನದಲ್ಲಿರುವ ಐದು ರಾಜ್ಯಗಳಿಂದಲೇ ಶೇ.30 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಅತಿ ಹೆಚ್ಚು ಬಾಧಿತವಾದ ಪ್ರದೇಶಗಳಲ್ಲೊಂದಾದ ದೆಹಲಿ ಇದೀಗ ಸೋಂಕು ಹರಡುವಿಕೆಯಿಂದ ಚೇತರಿಸುತ್ತಿದ್ದು, ಪ್ರಸ್ತುತ ಸಕ್ರಿಯ ಪ್ರಕರಣಗಳು 15 ಸಾವಿರದಷ್ಟಿವೆ. ಕರ್ನಾಟಕದಲ್ಲಿ 47,069, ಆಂಧ್ರಪ್ರದೇಶದಲ್ಲಿ 32,336 ಮತ್ತು ತಮಿಳುನಾಡಿನಲ್ಲಿ 51,347 ಸಕ್ರಿಯ ಪ್ರಕರಣಗಳಿವೆ.

ಕರೊನಾ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ (3.2 ಲಕ್ಷ ಪ್ರಕರಣ) ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಸ್ಥಾನಗಳಲ್ಲಿ ತಮಿಳುನಾಡು, ದೆಹಲಿ (1.25 ಲಕ್ಷ), ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳಿವೆ. 50,379 ಪ್ರಕರಣ ಇರುವ ಗುಜರಾತನ್ನು ಕನಾಟಕ ಹಾಗೂ ಆಂಧ್ರಪ್ರದೇಶ ಬಹುಬೇಗನೆ ಹಿಂದಿಕ್ಕಿವೆ. ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಸೋಂಕಿತರ ಸಂಖ್ಯೆ ಮತ್ತೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 4,764 ಪ್ರಕರಣಗಳು ವರದಿ ಆಗಿದ್ದು, ಸೋಂಕಿತರ ಸಂಖ್ಯೆ 75,833ಕ್ಕೆ ಏರಿದೆ. 55 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 1,519 ತಲುಪಿದೆ. ಆಂಟಿಜೆನ್ ಪರೀಕ್ಷೆ ಆರಂಭಿಸಿದ ಬಳಿಕ ರಾಜ್ಯದಲ್ಲಿ ಇದೇ ಮೊದಲಿಗೆ ಒಂದೇ ದಿನ 48,140 ಜನ ಪರೀಕ್ಷೆಗೆ ಒಳಪಟ್ಟಿದ್ದು, 1 ವಾರದಲ್ಲಿ 28,580 ಜನರಲ್ಲಿ ಸೋಂಕು ದೃಢಪಟ್ಟಿದೆ. 591 ಮಂದಿ ಮೃತಪಟ್ಟಿದ್ದಾರೆ. ಬುಧವಾರ 1,780 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣವಾದವರ ಸಂಖ್ಯೆ 27,239 ತಲುಪಿದೆ. ಆದರೆ 618 ರೋಗಿಗಳು ಐಸಿಯುನಲ್ಲಿದ್ದಾರೆ.

ಹೊಸ ಪ್ರಕರಣಗಳು: ಬೆಂಗಳೂರಿನಲ್ಲಿ 2050, ಉಡುಪಿ 281, ಬೆಳಗಾವಿ 219, ಕಲಬುರಗಿ 175, ದಕ್ಷಿಣಕನ್ನಡ 162, ಧಾರವಾಡ 158, ಮೈಸೂರು 145, ಬೆಂಗಳೂರು ಗ್ರಾ. 139, ರಾಯಚೂರು 135, ಬಳ್ಳಾರಿ 134, ಚಿಕ್ಕಬಳ್ಳಾಪುರ 110, ದಾವಣಗೆರೆ 96, ಕೋಲಾರ 88, ಚಿಕ್ಕಮಗಳೂರು 82, ಬೀದರ್ 77, ಹಾಸನ 72, ಗದಗ 71, ಬಾಗಲಕೋಟೆ 70, ಉತ್ತರಕನ್ನಡ 63, ಶಿವಮೊಗ್ಗ 59, ವಿಜಯಪುರ ಮತ್ತು ತುಮಕೂರು ತಲಾ 52, ಹಾವೇರಿ 50, ರಾಮನಗರ 45, ಯಾದಗಿರಿ 43, ಚಿತ್ರದುರ್ಗ 40, ಮಂಡ್ಯ 37, ಚಾಮರಾಜನಗರ 31, ಕೊಪ್ಪಳ 21, ಕೊಡಗು 7 ಸೇರಿ ರಾಜ್ಯದಲ್ಲಿ 4,764 ಜನರಲ್ಲಿ ಸೋಂಕು ದೃಢಪಟ್ಟಿದೆ.

55 ಬಲಿ: ಬೆಂಗಳೂರಿನಲ್ಲಿ 15, ಧಾರವಾಡ-ಮೈಸೂರು ತಲಾ 5, ಹಾವೇರಿ 4, ದ.ಕ., ಉ.ಕ., ಬೀದರ್, ಹಾಸನ ತಲಾ 3, ರಾಯಚೂರು, ಚಿಕ್ಕಮಗಳೂರು, ಬಾಗಲಕೋಟೆ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ತಲಾ 2, ಕೋಲಾರ, ಕಲಬುರಗಿ, ಉಡುಪಿ, ಚಾಮರಾಜನಗರದಲ್ಲಿ ತಲಾ ಒಂದರಂತೆ 55 ಮಂದಿ ಸಾವಿಗೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net