ಮಲಬಾರ್​ ವಿಶ್ವರಂಗ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ...

Vishwaranga Lead
Published on

ಐವರು ಹಿರಿಯ ರಂಗಕರ್ಮಿಗಳಿಗೆ ಗೌರವ

ಮಾ.26ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ ಉಡುಪಿ ವತಿಯಿಂದ ನೀಡುವ ಆರನೇ ವರ್ಷದ ಪ್ರತಿಷ್ಠಿತ ಮಲಬಾರ್​ ವಿಶ್ವರಂಗ ಪುರಸ್ಕಾರಕ್ಕೆ ರಾಜ್ಯ ಮತ್ತು ಹೊರ ರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.

Vishwaranga2
ಗಣೇಶ್​
Vishwaranga3
ಪ್ರಿಯಾ

ರಂಗ ನಟ, ಸಂಘಟಕ ಹಾಗೂ ನಿರ್ದೇಶಕ ಧಾರವಾಡದ ಅರವಿಂದ ಕುಲಕರ್ಣಿ, ಬೈಂದೂರಿನ ರಂಗ ಸಂಘಟಕ ಹಾಗೂ ನಿರ್ದೇಶಕ ಗಣೇಶ್​ ಕಾರಂತ, ಮುಂಬಯಿಯ ರಂಗನಟಿ ಹಾಗೂ ಕಂಠದಾನ ಕಲಾವಿದೆ ಪ್ರಿಯಾಸರೋಜಾದೇವಿ, ಉಡುಪಿಯ ರಂಗನಟ ಹಾಗೂ ಸಂಘಟಕ ಪ್ರಕಾಶ್​ ಜಿ. ಕೊಡವೂರು, ಮಂಗಳೂರಿನ ರಂಗನಟಿ ಮಂಜುಳಾ ಜನಾರ್ದನ್​ 2025ನೇ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾದ ಕಲಾವಿದರು.

Vishwaranga 4
ಪ್ರಕಾಶ್
Vishwaranga5
ಮಂಜುಳಾ

ಮಾ.26ರಂದು ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ, ಫಲಕ, ನಗದು ಹಾಗೂ ಬೆಳ್ಳಿ ಪದಕದೊಂದಿಗೆ ಮಲಬಾರ್​ ವಿಶ್ವರಂಗ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕ ರಾಜೇಶ್​ ಭಟ್​ ಪಣಿಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net