

ಬಸವಕಲ್ಯಾಣ: ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ದೊಡ್ಡಪ್ಪ ಅಪ್ಪ ಬಿಸಿಎ ಮಹಾವಿದ್ಯಾಲಯಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಐದು ರ‍್ಯಾಂಕ್ ಬಂದಿವೆ.
೨೦೨೨-೨೩ರ ಬಿಸಿಎ ಪರೀಕ್ಷಾ ಫಲಿತಾಂಶ ಗುಲ್ಬರ್ಗ ವಿವಿ ಪ್ರಕಟಿಸಿದ್ದು, ಹತ್ತು ರ‍್ಯಾಂಕ್‌ಗಳಲ್ಲಿ ಐದು ಬಸವಕಲ್ಯಾಣದ ದೊಡ್ಡಪ್ಪ ಅಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ವೈಶಾಲಿ ಸಂಗಪ್ಪ ಮಾಲಾಡೆ ೨ನೇ ರ‍್ಯಾಂಕ್, ಬಿ.ದೀಕ್ಷಿತಾ ಮಾಣಿಕರೆಡ್ಡಿ ೪ನೇ, ಸುಧಾರಾಣಿ ವೀರಯ್ಯ ೬ನೇ, ವೈಭವ ದತ್ತಾತ್ರೇಯ ೮ ಹಾಗೂ ಭಾಗ್ಯಶ್ರೀ ಸುಭಾಷ ೧೦ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಪ್ರಾಚಾರ್ಯ ಲೋಕೇಶ ಮನ್ನಾಳೆ ತಿಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಘದ ಸಂಸ್ಥಾಪಕರಾದ ಶ್ರೀ ಡಾ.ಶರಣಬಸವಪ್ಪ ಅಪ್ಪ, ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಸನ್ಮಾನಿಸಿ ಅಭಿನಂದಿಸಿದ್ದಾರೆ.
ಕಾಲೇಜು ಪ್ರಾಚಾರ್ಯ ಲೋಕೇಶ ಮನ್ನಾಳೆ, ಉಪನ್ಯಾಸಕರಾದ ಶಾಂತಕುಮಾರ ಭೂರೆ, ಶಿಲ್ಪಾರಾಣಿ ಖಿಂಡಿಮಠ, ಶಶಿಧರ ಪಾಟೀಲ್, ಶಿವಕುಮಾರ ಖೊಲ್ಲೆ, ವಿವೇಕಾನಂದ ಶಿಂಧೆ, ಶಿವಶರಣ ಮಮ್ಮಾ, ನೀಲೇಶಕುಮಾರ ಟೊಂಪೆ, ಇಂದ್ರಜೀತ ರೆಡ್ಡಿ, ವಾಣಿಶ್ರೀ ಪಾಟೀಲ್ ಮತ್ತು ಸುಪ್ರಿಯಾ ಶೆಟಗಾರ ಪ್ರತಿಭೆ ಸಂತಸ ವ್ಯಕ್ತಪಡಿಸಿದ್ದಾರೆ.