ಲಕ್ಷ್ಮೇಶ್ವರ ಪುರಸಭೆಗೆ ಐವರು ನಾಮನಿರ್ದೇಶನ

Published on

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಗೆ ಸದಸ್ಯರಾಗಿ ಐವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದೆ.

ಯುವ ಮುಖಂಡರಾದ ನೀಲಪ್ಪ ಪೂಜಾರ, ವಾಸೀಂ ಅಕ್ರಮ್ ಮುಚ್ಚಾಲೆ, ಶಿವಪ್ರಕಾಶ ಕೊಂಚಿಗೇರಿಮಠ, ಮಹಾಂತೇಶ ಗುಡಿಸಲಮನಿ ಹಾಗೂ ಕಿರಣ ನವಲೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net