

ಮಂಗಳೂರು: ಸುಪಾರಿ ನೀಡಿ ಪತಿಯನ್ನು ಕೊಲೆಗೈದ ಪತ್ನಿ ಸಹಿತ ಸಹಿತ 5 ಮಂದಿಯ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಮಂಗಳವಾರ ನೀಡಿದೆ.
ಬಿ.ಸಿ.ರೋಡ್ ನಿವಾಸಿ ಅಬ್ದುಲ್ ಮುನ್ಾ ಯಾನೆ ಮುನ್ನ (41), ಉಳ್ಳಾಲ ನಿವಾಸಿ ಅಬ್ದುಲ್ ರಹಿಮಾನ್ (36), ಬೊಳಿಯಾರು ನಿವಾಸಿ ಶಬೀರ್ ಯಾನೆ ಶಬ್ಬಿ (31), ಕುತ್ತಾರ್ಪದವು ನಿವಾಸಿ ಜಮಾಲ್ ಅಹಮದ್ (38), ಪಾವೂರು ನೆಬಿಸಾ (40) ಶಿಕ್ಷೆಗೊಳಗಾದ ಅಪರಾಧಿಗಳು. ಪಾವೂರು ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್ (59) ಕೊಲೆಯಾದವರು.
ಪ್ರಕರಣ ವಿವರ: ಪಾವೂರು ನಿವಾಸಿ ಇಸ್ಮಾಯಿಲ್ಗೆ ನೆಬಿಸಾ ಜತೆ ಎರಡನೇ ಮದುವೆಯಾಗಿದ್ದು, ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ನೆಬಿಸಾಳಿಗೆ ಕುತ್ತಾರ್ಪದವು ಜಮಾಲ್ ಜತೆ ಅಕ್ರಮ ಸಂಬಂಧವಿದ್ದು, ಇದೇ ವಿಚಾರದಲ್ಲಿ ಇಸ್ಮಾಯಿಲ್ ಮತ್ತು ನೆಬಿಸಾ ಜತೆ ಪದೇ ಪದೇ ಗಲಾಟೆಯಾಗುತ್ತಿತ್ತು. ಈ ಕಾರಣದಿಂದ ನೆಬಿಸಾ ಜಮಾಲ್ ಜತೆ ಸೇರಿಕೊಂಡು ಗಂಡ ಇಸ್ಮಾಯಿಲ್ನನ್ನು ಕೊಲೆ ಮಾಡಲು ನಿರ್ಧರಿಸಿ, ಅಬ್ದುಲ್ ರಹಿಮಾನ್ ಎಂಬಾತನ ಜತೆ ಸೇರಿ ದೇರಳಕಟ್ಟೆ ಗ್ರೀನ್ಲ್ಯಾಂಡ್ ಗ್ರೌಂಡ್ ಬಳಿ ಸಂಚು ರೂಪಿಸಿದ್ದರು.
2016ರ ೆ.16ರಂದು ಸಂಜೆ ಆರೋಪಿ ಅಬ್ದುಲ್ ರಹಿಮಾನ್ ಬೆಂಗಳೂರಿಗೆ ಬಾಡಿಗೆಯಿದೆ ಎಂದು ಹೇಳಿ ಇಸ್ಮಾಯಿಲ್ನನ್ನು ನಂಬಿಸಿ ಕರೆದೊಯ್ದು, ರಾತ್ರಿ ಕೆಂಪುಹೊಳೆ ಸಮೀಪ ರಕ್ಷಿತಾರಣ್ಯದೊಳಗೆ ಕರೆದೊಯದು ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಗಂಡನ ಕೊಲೆಗೆ ಸುಪಾರಿ ಕೊಟ್ಟ ಆರೋಪಿ ನೆಬಿಸಾ ತನ್ನ ಮೇಲೆ ಅನುಮಾನ ಬರದಿರಲೆಂದು 2016ರ ೆ.17ರಂದು ಗಂಡ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕೃತ್ಯದಲ್ಲಿ ಭಾಗಿಯಾದ 5ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಕರಣ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಾಂತರಾಜ ಎಸ್.ವಿ. ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.
ಶಿಕ್ಷೆ ಪ್ರಮಾಣ ಪ್ರಕಟ: 5ಮಂದಿ ಅಪರಾಧಿಗಳಿಗೆ ಕೊಲೆ ಪ್ರಕರಣದಡಿ ಜೀವಾವಧಿ ಶಿಕ್ಷೆ ಮತ್ತು 2ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ 2ವರ್ಷ ಸಜೆ, ಸಾಕ್ಷ್ಯ ನಾಶದಡಿ 7ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ, ಒಳಸಂಚು ಪ್ರಕರಣದಡಿ 7ವರ್ಷ ಕಠಿಣ ಸಜೆ ಮತ್ತು 50ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಲಯ ಇಸ್ಮಾಯಿಲ್ ಮತ್ತು ನೆಬಿಸಾ ದಂಪತಿಯ ನಾಲ್ವರು (1ಹೆಣ್ಣು 3 ಗಂಡು) ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಬಹುದೆಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಕೊಲೆಗೈದ ಆರೋಪಿಗಳು ಉಪ್ಪಿನಂಗಡಿ ಬತ್ತೂರು ನೀರಕಟ್ಟೆ ಬಳಿ ಏಸ್ ವಾಹನವನ್ನು ಬಿಟ್ಟು ಮಂಗಳೂರಿಗೆ ಬಂದಿದ್ದರು. ಈ ವಾಹನದಲ್ಲಿ ರಕ್ತದ ಕಲೆಗಳು ಕಂಡು ಬಂದಿತ್ತು ಇದೇ ಅನುಮಾನದಲ್ಲಿ ಇಸ್ಮಾಯಿಲ್ ಅವರ ಮೊದಲ ಪತ್ನಿಯ ಪುತ್ರ ತಮ್ಮ ಚಿಕ್ಕಮ್ಮನ ಮೇಲೆಯೇ ಅನುಮಾನಪಟ್ಟು ೆ.18ರಂದು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ವಿಚಾರಣೆ ಸತ್ಯಾಂಶ ಬಯಲಿಗೆ ಬಂದಿದೆ.
ಗಂಡನ ಕೊಲೆಗೆ ಸುಪಾರಿ ನೀಡಿದ ನೆಬಿಸಾ ಕೊಲೆ ಕೃತ್ಯ ನಡೆದ ಬಳಿಕ ಆರೋಪಿಗಳಿಗೆ 2.50 ಲಕ್ಷ ರೂ. ಹಣ ನೀಡಬೇಕಿತ್ತು. ಇದಕ್ಕಾಗಿ ತನ್ನ ಚಿನ್ನಾಭರಣಗಳನ್ನು ತೊಕ್ಕೊಟ್ಟುವಿನ ೈನಾನ್ಸೊಂದರಲ್ಲಿ ಅಡವಿಟ್ಟು ಹಣ ನೀಡಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ.
ಪ್ರಕರಣದಲ್ಲಿ ಕೊಣಾಜೆ ಠಾಣಾ ಇನ್ಸ್ಪೆಕ್ಟರ್ ಅಶೋಕ್ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಜುಡಿತ್ ಒ.ಎಂ. ಕ್ರಾಸ್ತಾ ಮತ್ತು ಜ್ಯೋತಿ ಪಿ. ನಾಯಕ್ ಸಾಕ್ಷಿ ವಿಚಾರಣೆ ನಡೆಸಿದ್ದರು. ಬಿ.ಶೇಖರ್ ಶೆಟ್ಟಿ ಮತ್ತು ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು.