ಮನೆಯಲ್ಲಿ ಕಳವು ಮಾಡಿದ್ದ ಅಸ್ಸಾಂ ಮೂಲದ ಐವರ ಬಂಧನ

Published on

ಗೋಣಿಕೊಪ್ಪಲು: ಕಳೆದ ಡಿಸೆಂಬರ್‌ನಲ್ಲಿ ಹುತ್ತರಿ ಹಬ್ಬದ ಮಧ್ಯರಾತ್ರಿ ತೋಟದ ಒಂಟಿಮನೆ ಕಳ್ಳತನ ಮಾಡಿ ಚಿನ್ನಾಭರಣ, ಕರಿಮೆಣಸು ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಿದ್ದ ಅಸ್ಸಾಂ ಮೂಲದ ಐವರು ಕಾರ್ಮಿಕರನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಟ್ಟೋಳಿಮಾನಿ ಗ್ರಾಮದ ಬಲ್ಲಣಮಾಡ ದೇವಯ್ಯ ಎಂಬುವರ ಒಂಟಿ ಮನೆ ಹಿಂಬಾಗಿಲನ್ನು ಮುರಿದ ಕಳ್ಳರು ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದರು. ಅಲ್ಲದೆ ಮನೆಯ ಹೊರಭಾಗದ ಗೋದಾಮಿನಲ್ಲಿ ಇಡಲಾಗಿದ್ದ ಕರಿಮೆಣಸನ್ನು ಕದ್ದೊಯ್ದಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷರಾದ ಶಿವರಾಜ್ ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net