ಆಂಧ್ರದಲ್ಲಿ ಶುಕ್ರವಾರ ನಡೆದ ಅಪಘಾತಕ್ಕೆ ಅಥಣಿಯ ಐವರು ಬಲಿ

IMG-20230915-WA0053.jpg
Published on

ಬೆಳಗಾವಿ : ಸಂಬಂಧಿಕರೊಂದಿಗೆ ಕುಟುಂಬ ಸಮೇತರಾಗಿ ತಿರುಪತಿ ದರ್ಶನಕ್ಕೆ 16 ಜನ ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಕ್ರೂಸರ್ ಶುಕ್ರವಾರ ಆಂಧ್ರದಲ್ಲಿ ಅಪಘಾತಕ್ಕೀಡಾದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟು, 11 ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಧಾರುಣ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ಅಥಣಿ ತಾಲೂಕಿನ ಬಡಚಿ ಗ್ರಾಮದ ಹಣಮಂತ ನಿಂಗಪ್ಪ ಆಜೂರ (40), ಮಹಾನಂದ ಹಣಮಂತ ಆಜೂರ (32), ಶೋಭಾ ಮಲ್ಲಪ್ಪ ಆಜೂರ (36) ಅಂಬಿಕಾ ಮಲ್ಲಪ್ಪಾ ಆಜೂರ (15) ಹಾಗೂ ಚಾಲಕ ಹಣಮಂತ ಸಿದ್ದುಬಾ ಜಾಧವ (35) ಮತ ದುರ್ದೈವಿಗಳು. ಒಟ್ಟು 16 ಜನರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮರಳಿ ಅಲ್ಲಿಂದ ಸ್ವಗ್ರಾಮಕ್ಕೆ ಆಗಮಿಸುತ್ತಿರುವಾಗ ಶುಕ್ರವಾರ ನಸುಕಿನ 3.30ರ  ಸುಮಾರಿಗೆ ಮಠಂಪಲ್ಲಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದ ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬ ನಾಲ್ವರು ಹಾಗೂ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು,  ಗಾಯಾಳುಗಳಾದ ಕಸ್ತೂರಿ, ಮೇಘಾ, ಶಿವಾನಂದ, ಬಸಪ್ಪ, ಮಲ್ಲಪ್ಪ, ಅಕ್ಷತಾ, ಉದಯ, ಸುನಂದಾ, ಮಹೇಶ, ಸಾಕ್ಷಿ, ಬಸವರಾಜ ಒಟ್ಟು 11 ಜನರು  ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ,  

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಅಲ್ಲಿಯ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳಿಯರ ನೆರವಿನೊಂದಿಗೆ ವಾಹನದಲ್ಲಿ ಸಿಲುಕಿದ್ದ ಮತದೇಹಗಳನ್ನು ಹೊರತೆಗೆದು ಗಾಯಾಳುಗಳನ್ನು ರೂಯಾ ಆಸ್ಪತ್ರೆಗೆ ರವಾನಿಸಿದ್ದಾರೆ, ಈ ಕುರಿತು ಮಠಂಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಸುದ್ದಿ ತಿಳಿದ ತಕ್ಷಣ ಸಂಬಂಕರು ಹಾಗೂ ಗ್ರಾಮದ ಹಿರಿಯರು ತೆರಳಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತ ದೇಹಗಳನ್ನು ಮಠಂಪಲ್ಲಿಯಿಂದ ಬಡಚಿ ಗ್ರಾಮಕ್ಕೆ ಶನಿವಾರ ರಾತ್ರಿ ತರಲಾಗುತ್ತಿದ್ದು, ಸಂಬಂಧಿಕರ ಆಕ್ರಂಧನ ಮುಗಿಕಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net