ಚಿತ್ರದುರ್ಗದಲ್ಲಿ ಬಸ್​ಗೆ ಬೆಂಕಿ ತಗುಲಿ ಮೂವರು ಮಕ್ಕಳು ಸೇರಿದಂತೆ ಐವರು ಸಜೀವ ದಹನ

Bus
Published on

ಚಿತ್ರದುರ್ಗ: ಖಾಸಗಿ ಬಸ್​ಗೆ ಬೆಂಕಿ ಬಿದ್ದು ಐವರು ಸಜೀವ ದಹನವಾಗಿರುವ ಘಟನೆ ಹಿರಿಯೂರು ತಾಲೂಕಿನ ಆದಿವಾಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಸ್ ಪೂರ್ಣವಾಗಿ ಸುಟ್ಟ ಹೋಗಿದ್ದು, ಗಾಯಗೊಂಡವರನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮಕ್ಕಳು, ಇಬ್ಬರು ಹಿರಿಯರು ಸಜೀವ ದಹನವಾಗಿದ್ದು, ಮೃತರ ಮಾಹಿತಿ ಲಭ್ಯವಾಗಬೇಕಿದೆ.

ಆದಿವಲ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಡರಾತ್ರಿ ಘಟನೆ ಸಂಭವಿಸಿದೆ. ಖಾಸಗಿ ಬಸ್​ ವಿಜಯಪುರ ಜಿಲ್ಲೆಯಿಂದ ಬೆಂಗಳೂರು ಕಡೆ ಹೊರಟಿತ್ತು. ಬಸ್ಸಿನಲ್ಲಿ ಒಟ್ಟು 30 ಪ್ರಯಾಣಿಕರಿದ್ದರು. ಮಾರ್ಗಮಧ್ಯೆ ಆಕಸ್ಮಿಕವಾಗಿ ಸಂಬಂಧಿಸಿದ ಬೆಂಕಿ ಅವಘಡದಿಂದ ಐವರು ಸಜೀವ ದಹನವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net