ಕರ್ನಾಟಕಕ್ಕೆ ಪಂಚಪದ್ಮ: ಕವಿ ಸಿದ್ದಲಿಂಗಯ್ಯಗೆ ಮರಣೋತ್ತರ ಪದ್ಮಶ್ರೀ, ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ

Siddalingayya
Published on

ನವದೆಹಲಿ: ಕೇಂದ್ರ ಸರ್ಕಾರ ಪ್ರಕಟಿಸಿರುವ ಪದ್ಮಪ್ರಶಸ್ತಿಗಳ ಪೈಕಿ ಕರ್ನಾಟಕಕ್ಕೆ ಐದು ಪದ್ಮಶ್ರೀ ಪ್ರಶಸ್ತಿಗಳು ಒಲಿದು ಬಂದಿವೆ. ಕೆಲವು ತಿಂಗಳ ಹಿಂದಷ್ಟೇ ಅಗಲಿದ ಕವಿ ಸಾಹಿತಿ ಸಿದ್ದಲಿಂಗಯ್ಯ ಅವರನ್ನು ಮರಣೋತ್ತರ ಪದ್ಮಶ್ರೀ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಇನ್ನು ಗುಡ್ಡಕ್ಕೆ ಸುರಂಗ ಕೊರೆದ ಕೃಷಿ ಸಾಹಸಿ, ದಕ್ಷಿಣಕನ್ನಡ ಜಿಲ್ಲೆಯ ಅಡ್ಯನಡ್ಕದ ಅಮೈ ಮಹಾಲಿಂಗ ನಾಯ್ಕ ಅವರೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಇವರು ಕೃಷಿಗಾಗಿ ಏಕಾಂಗಿಯಾಗಿ ಏಳು ಸುರಂಗ ಕೊರೆದು ನೀರು ಪಡೆದ ಭಗೀರಥ. ಕೆರೆಯಲ್ಲಿ ನೀರು‌ ಸಂಗ್ರಹಿಸಿ‌ ಗುರುತ್ವ ಬಲದ ಮೂಲಕ ತುಂತುರು ನೀರಾವರಿಯಾಗಿ ಹರಿಸಿ ಯಶಸ್ವಿಯಾಗಿದ್ದರು. ಇವರ ಸಾಧನೆ ಕುರಿತು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದ್ದು, ದಿಗ್ವಿಜಯ ಸುದ್ದಿವಾಹಿನಿ ವಿಶೇಷ ವರದಿ ಪ್ರಸಾರ ಮಾಡಿತ್ತು.

ಪದ್ಮಶ್ರೀಗೆ ಆಯ್ಕೆ ಆಗಿರುವ ಮತ್ತೊಬ್ಬ ಕನ್ನಡಿಗ ಧಾರವಾಡದ ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ್. ಇವರು ಬಿತ್ತನೆ ಕೂರಿಗೆ ಸಂಶೋಧನೆ ಮಾಡಿ ತಾವೇ ಮಾರುಕಟ್ಟೆಗೆ ಪರಿಚಯಿಸಿದ್ದರು. ಕೂರಿಗೆ ಜತೆಗೆ ಇನ್ನೂ ವಿವಿಧ ಕೃಷಿ ಸಲಕರಣೆಗಳನ್ನು ಇವರು ಆವಿಷ್ಕಾರ ಮಾಡಿದ್ದರು. ಕಲಾವಿದ ಎಚ್.ಆರ್.ಕೇಶವಮೂರ್ತಿ, ವಿಜ್ಞಾನ-ತಂತ್ರಜ್ಞಾನ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪನ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net