

ಮೈಸೂರು: ಹಳೆಯ ಧ್ವೇಷದಿಂದ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಐವರು ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕ್ಯಾತಮಾರನಹಳ್ಳಿಯ ಅಶ್ವಥಕಟ್ಟೆ ಬಳಿ ಆ.31 ರಂದು ಹಳೆಯ ದ್ವೇಷಕ್ಕೆ ಐವರು ಆರೋಪಿಗಳು ತಮ್ಮ ಸ್ನೇಹಿತನ ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿ ಮತ್ತೊಬ್ಬರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದರು.
ಡಿಸಿಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ನಡೆದ ಆರೋಪಿಗಳ ಪತ್ತೆ ಕಾರ್ಯದಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್. ಶಶಿಧರ್, ಉದಯಗಿರಿ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ರಾಜು, ಪಿಎಸ್‌ಐಗಳಾದ ಸುನೀಲ್, ನಾಗರಾಜ ನಾಯಕ್, ರೂಪೇಶ್, ಸಿಬ್ಬಂದಿ ಶಂಕರ್, ಸಿದ್ದೀಕ್ ಅಹಮದ್, ಸೋಮಶೇಖರ, ಪುಟ್ಟರಾಜು, ಗೋಪಾಲ್, ಆನಂದ್, ರವಿಕುಮಾರ್, ರಾಥೋಡ್, ಮೋಹನ್, ಶಿವರಾಜಪ್ಪ, ಸಮೀರ್, ನಾಗೂರ್ ಪಾಲ್ಗೊಂಡಿದ್ದರು.