ಪಾಲಿಕೆಗೆ ಐವರ ನಾಮನಿರ್ದೇಶನ

srinivas beladadi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಐವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಗರಾಭಿವೃದ್ಧಿ ಇಲಾಖೆ ನಾಮನಿರ್ದೇಶನ ಮಾಡಿ, ಆದೇಶ ಹೊರಡಿಸಿದೆ.

ಶ್ರೀನಿವಾಸ ಬೆಳದಡಿ, ಮೊಹಮ್ಮದ್ ಆರೀಫ್ ದೊಡ್ಡಮನಿ, ಅರ್ಜುನ ಅನಿಲಕುಮಾರ ಪಾಟೀಲ, ತುಳಜಪ್ಪ ಪೂಜಾರ ಹಾಗೂ ಪ್ರಕಾಶ ಘಾಟಗೆ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿ ಇದ್ದು, 82 ಜನ ಚುನಾಯಿತ ಸದಸ್ಯರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳ ಬಳಿಕ ಪಾಲಿಕೆಗೆ ಅಧಿಕಾರೇತರ ಸದಸ್ಯರನ್ನು ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net