ಬೈಕ್‌ಗಳಿಗೆ ಸಾರಿಗೆ ಬಸ್ ಡಿಕ್ಕಿ ಐವರ ಸಾವು

RAICHUR
RAICHUR
Published on

ಮಾನ್ವಿ ಚಲಿಸುತ್ತಿದ್ದ ಎರಡು ಬೈಕ್‌ಗಳಿಗೆ ಹಿಂದಿನಿAದ ಬಂದ ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ೪ ಜನ ಸ್ಥಳದಲ್ಲಿಯೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಆದೋನಿ ತಾಲೂಕಿನ ಪಾಂಡವಗಲï ಗ್ರಾಮದ ಬಳಿ ಮಂಗಳವಾರ ಜರುಗಿದೆ.

ಮಾನ್ವಿ ಮೂಲದ ಹೇಮಾದ್ರಿ(೫೫),ಪತ್ನಿ ನಾಗರತ್ನಮ್ಮ (೪೪),ಮಗ ದೇವರಾಜು(೨೪) ಹಾಗೂ ಅದೋನಿ ತಾಲೂಕಿನ ಕುಪ್ಪಗಲು ಗ್ರಾಮದ ಪತಿ ಈರಣ್ಣ (೪೦), ಪತ್ನಿ ಆದಿಲಕ್ಷ್ಮಿ (೩೦)ಮೃತಪಟ್ಟ ರ್ದುದೈವಿಗಳು.

ಗಂಗಾವತಿ ಘಟಕದ ಸಾರಿಗೆ ಬಸ್ ಎಂದಿನAತೆ ಗಂಗಾವತಿಯಿAದ ಮಂತ್ರಾಲಯಕ್ಕೆ ತೆರಳುತ್ತಿತ್ತು. ಆದೇ ಮಾರ್ಗದಿಂದ ಆದೋನಿಗೆ ತೆರಳುತ್ತಿದ್ದ ಮಾನ್ವಿ ಮೂಲದ ಹೇಮಾದ್ರಿ ಅವರು ಪತ್ನಿ ನಾಗರತ್ನಮ್ಮ,ಮಗ ದೇವರಾಜು ಸೇರಿ ಒಂದೇ ಬೈಕ್‌ನಲ್ಲಿ ಚಲಿಸುತ್ತಿದ್ದರೇ, ಮತ್ತೊಂದು ಬೈಕ್‌ನಲ್ಲಿ ಕುಪ್ಪಗಲ್ಲು ಗ್ರಾಮದ ಕಡೆ ಹೊರಟಿದ್ದ ಈರಣ್ಣ ,ಪತ್ನಿ ಆದಿಲಕ್ಷಿ÷್ಮÃ ತೆರಳುವಾಗ ಸಾರಿಗೆ ಬಸ್‌ನ ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿAದ ಡಿಕ್ಕಿ ಹೊಡೆದ ಪರಿಣಾಮ ೪ ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು,

ಗಂಭೀರವಾಗಿ ಗಾಯಗೊಂಡ ಹೇಮಾದ್ರಿಯನ್ನು ಆದೋನಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತಿದ್ದಂತೆ ಸ್ಥಳಕ್ಕೆ ಆದೋನಿ ಪೊಲೀಸರು ಹಾಗೂ ಕೆಕೆಆರ್‌ಟಿಸಿ ರಾಯಚೂರು ಘಟಕದ ವಿಭಾಗೀಯ ನಿಯಂತ್ರಣಾಽಕಾರಿ ಎಂ.ಚAದ್ರಶೇಖರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳು ಆದೋನಿ ಸರ್ಕಾರಿ ಆಸ್ಪತ್ರೆಗೆ ರವಾಸಿದ್ದಾರೆ.

ಆದೋನಿ ಪೊಲೀಸï ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net