ಜನರ ವಿಶ್ವಾಸ ಗೆದ್ದ ಪಂಚ ಗ್ಯಾರಂಟಿಗಳು

Five guarantees that won people's trust
ವಿಜಯಪುರ ನಗರದ ಭೂತನಾಳ ತಾಂಡಾದಲ್ಲಿ ಸಚಿವ ಎಂ.ಬಿ. ಪಾಟೀಲ ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿದರು. ರಾಜು ಚವಾಣ, ರಾಜು ಜಾಧವ, ಕಿಸನ ಮಹಾರಾಜ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್​ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ೂಷಣೆ ಮಾಡಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಈಗಾಗಲೇ ಜನಮನ ಗೆದ್ದಿವೆ.

ಹೀಗಾಗಿ ಮತದಾರರು ಕಾಂಗ್ರೆಸ್​ ನಾಯಕರ ಮುಖ ನೋಡಿ ಮತ ಹಾಕಲಿದ್ದು, ರಾಜು ಆಲಗೂರ ಅವರಿಗೆ ಮತಹಾಕುವ ಮೂಲಕ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ತಿಕೋಟಾ ತಾಲೂಕಿನ ಧನರ್ಗಿ, ೂಣಸಗಿ ಹಾಗೂ ವಿಜಯಪುರ ನಗರದ ಭೂತನಾಳ ತಾಂಡಾದಲ್ಲಿ ಶನಿವಾರ ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿ, ಕಾಂಗ್ರೆಸ್​ ಅಭಿವೃದ್ಧಿ ಕಾರ್ಯಗಳು ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದೆ.

ಅಹಿಂದ ವರ್ಗಕ್ಕೆ ಕಾಂಗ್ರೆಸ್​ ಅಪಾರ ಕೊಡುಗೆ ನೀಡಿದೆ. ಹೀಗಾಗಿ ಶೂನ್ಯ ಕೆಲಸ ಮಾಡಿದ ಸಂಸದರ ಬದಲು ವಿದ್ಯಾವಂತ ಮತ್ತು ಕ್ರಿಯಾಶೀಲ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.

ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ರಮೇಶ ಜಿಗಜಿಣಗಿ ವಿರೋಧಿ ಅಲೆ ಬೀಸುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳದೆ ಮತ ಕೇಳುವ ನೈತಿಕ ಹಕ್ಕನ್ನೂ ಅವರು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಬಾಂಡ್​ ಹಗರಣದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು ಜನ ಜಾಗೃತರಾಗಿದ್ದಾರೆ ಎಂದು ಹೇಳಿದರು.

ಮುಖಂಡರಾದ ದಾನಪ್ಪ ಚೌಧರಿ, ಆನಂದ ಗೊಳಸಂಗಿ, ಸೋಮನಾಥ ಬಾಗಲಕೋಟ, ಯಾಕೂಬ್​ ಜತ್ತಿ, ಕೆ.ಆರ್​. ಮೇಡೆಗಾರ ಮತ್ತು ಪಾಲಿಕೆ ಸದಸ್ಯ ರಾಜು ಚವಾಣ ಮಾತನಾಡಿ, ಸಚಿವ ಎಂ.ಬಿ. ಪಾಟೀಲರ ಅಭಿವೃದ್ಧಿ ಕಾರ್ಯಗಳ ಮೂಲಕ ನಮ್ಮ ಭಾಗದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದ್ದಾರೆ.

ಗಾಗಿ ನಮ್ಮೆಲ್ಲರ ಹಿತ ಬಯಸುವ ಎಂ.ಬಿ. ಪಾಟೀಲ ಅವರ ಕೈ ಬಲಪಡಿಸಲು ನಾವೆಲ್ಲ ಕಾಂಗ್ರೆಸ್​ ಅಭ್ಯರ್ಥಿಗೆ ಮತಹಾಕಿ ಗೆಲ್ಲಿಸೋಣ ಎಂದರು.
ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ೂಷಿಸಿದ ಪಂಚ ಗ್ಯಾರಂಟಿ ಯೋಜನೆಗಳ ಮಾದರಿ ಕಾರ್ಡ್​ಗಳನ್ನು ಸಚಿವರು ಸಾಂಕೇತಿಕವಾಗಿ ಮಹಿಳೆಯರಿಗೆ ವಿತರಿಸಿದರು.

ಸುಭಾಸ ಖೋತ, ಚನ್ನಪ್ಪ ದೈಗೊಂಡ, ದುಂಡಪ್ಪ ವಠಾರ, ಮಾಳಪ್ಪ ಪೂಜಾರಿ, ನಾಗಪ್ಪ ಜೋರಾಪುರ, ಬಸವರಾಜ ತೇಲಿ, ರಾಜು ಜೋರಾಪುರ, ಅಮಗೊಂಡ ಪೂಜಾರಿ, ಬಂದೇನವಾಜ ಮುಲ್ಲಾ, ಅಪ್ಪಾಸಾಹೇಬ ನಾಯಕ, ಅಂಬರೀಷ ಪಾಟೀಲ, ಗುರಲಿಂಗ ಮಾಳಿ, ಬಸಲಿಂಗ ನಿಡೋಣಿ, ಶ್ರೀಮಂತ ಬಂಡಗಾರ, ಭಾವಸಾಬ ಮಾನವರ, ಶ್ರೀಕಾಂತ ರಾಠೋಡ, ಕಿಸನ ಮಹಾರಾಜ, ಪ್ರಕಾಶ ಮಹಾರಾಜ, ಮೆು ಮಹಾರಾಜ, ರಾಜು ಜಾಧವ, ಕಾಸು ನಾಯಕ, ಹುನ್ನು ಶಂಕರ ನಾಯಕ, ಸುರೇಶ ಬಿಜಾಪುರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net