ಅಜ್ಜಂಪುರದಲ್ಲಿ ಐದು ದಿನ ರಂಗೋತ್ಸವ-2025

3 TKE 4
Published on

ತರೀಕೆರೆ: ಅಜ್ಜಂಪುರ ಗೆಳೆಯರ ಬಳಗ ರಂಗ ತಂಡ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅಜ್ಜಂಪುರದ ಕೈಲಾಸಂ ಕಲಾ ಕ್ಷೇತ್ರದಲ್ಲಿ 5 ರಿಂದ 10ರವರೆಗೆ ರಂಗೋತ್ಸವ-2025 ಆಯೋಜಿಸಲಾಗಿದೆ ಎಂದು ಗೆಳೆಯರ ಬಳಗ ರಂಗ ತಂಡದ ಅಧ್ಯಕ್ಷ ಎ.ಸಿ.ಚಂದ್ರಪ್ಪ ತಿಳಿಸಿದರು.

ಅಜ್ಜಂಪುರದಲ್ಲಿ ರಂಗೋತ್ಸವ-2025 ರ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ.ಏಕೋರಾಮ ಸ್ವಾಮಿ ಸ್ಮರಣಾರ್ಥ ರಂಗೋತ್ಸವ ಆಯೋಜಿಸಲಾಗಿದೆ. ಡಾ.ಬಿ.ಎಸ್. ನಾಗರಾಜ್ ನೆನಪಿನ ರಂಗದ್ವಾರವನ್ನು ಸಾಹಿತಿ ಚಟ್ನಹಳ್ಳಿ ಮಹೇಶ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಸ್.ಸಿದ್ದಪ್ಪ ಮತ್ತು ರೈತ ಎ.ಬಿ.ಮಲ್ಕಣ್ಣ , ನೆನಪಿನ ರಂಗ ವೇದಿಕೆಯನ್ನು ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್, ರಂಗೋತ್ಸವ-2025 ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀ ನಿವಾಸ್‌ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net